ನವದೆಹಲಿ: ದಕ್ಷಿಣ ಏಷ್ಯಾದ ನೆರೆಹೊರೆ ದೇಶಗಳಿಗೆ ಮತ್ತು ಬ್ರೆಜಿಲ್ ಮತ್ತು ಮೊರಾಕ್ಕೊ ಮುಂತಾದ ದೇಶಗಳಿಗೆ ಭಾರತವು ಲಸಿಕೆಗಳನ್ನ ಕಳುಹಿಸುತ್ತಿದ್ದು, ದಕ್ಷಿಣ ಆಫ್ರಿಕಾಕ್ಕು ಕೂಡ ಶೀಘ್ರದಲ್ಲೇ ಲಸಿಕೆ ರವಾನೆಯಾಗಲಿದೆ. ಭಾರತದ ಈ ಸದೃಯಕ್ಕೆ ಮೆಚ್ಚುಗೆ ಸೂಚಿಸಿದ ವಿಶ್ವ ಸಂಸ್ಥೆಯ ಮುಖ್ಯಸ್ಥರು, ಪ್ರಧಾನಿ ಮೋದಿಯವ್ರಿಗೆ ಧನ್ಯವಾದ ತಿಳಿಸಿದ್ದಾರೆ.
'ಜಾಗತಿಕ ಮಟ್ಟದಲ್ಲಿ ನಿಮ್ಮ ನಿರಂತರ ಬೆಂಬಲಕ್ಕಾಗಿ ಭಾರತ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳು. ಜ್ಞಾನ ಹಂಚಿಕೆಯಿಂದ ವೈರಸ್ ನಿಲ್ಲಿಸಿ ಜೀವ ಮತ್ತು ಜೀವಗಳನ್ನ ಉಳಿಸಲು ಸಾಧ್ಯ' ಎಂದು ವಿಶ್ವ ಆರೋಗ್ಯ ಸಂಸ್ಥೆಯ ಪ್ರಧಾನ ನಿರ್ದೇಶಕ ಟೆಡ್ರೋಸ್ ಅಧನೋಮ್ ಘೆಬ್ರೆಸಸ್ ಟ್ವೀಟ್ ಮೂಲಕ ಧನ್ಯವಾದ ತಿಳಿಸಿದರು.