ರೈಲು ಕಾರಿಗೆ ಡಿಕ್ಕಿ: 13 ಮಂದಿ ಸಾವು

ರೈಲು ಕಾರಿಗೆ ಡಿಕ್ಕಿ: 13 ಮಂದಿ ಸಾವು

Dec 08, 2015 11:33:47 AM (IST)

ರಾಮ್ ಗಡ್: ರೈಲ್ವೇ ಕ್ರಾಸಿಂಗ್ ಸಮೀಪ ಹೌರಾ ಭೋಪಾಲ್ ಎಕ್ಸ್ ಪ್ರೆಸ್ ರೈಲು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ 13 ಮಂದಿ ಸಾವನ್ನಪ್ಪಿದ್ದಾರೆ.

ಹೌರಾ-ಭೂಪಾಲ್ ಎಕ್ಸ್‌ಪ್ರೆಸ್‌ ರೈಲು ರಾಮಗಢ ಜಿಲ್ಲೆಯ ಬುರ್ಕುಂಡಾ ರೇಲ್ವೆ ನಿಲ್ದಾಣ ಬಳಿ ಸೋಮವಾರ ರಾತ್ರಿ ಕಾರಿಗೆ ರೈಲು ಡಿಕ್ಕಿ ಹೊಡೆದ ಪರಿಣಾಮ ಐವರು ಮಕ್ಕಳು ಸೇರಿ 13 ಮಂದಿ ಸಾವನ್ನಪ್ಪಿದ್ದಾರೆ. ಕಾರಿನೊಳಗೆ 5 ಮಕ್ಕಳು ಸೇರಿದಂತೆ 13 ಮಂದಿ ಪ್ರಯಾಣಿಸುತ್ತಿದ್ದರು. ಕಾರು ಏಕಾಏಕಿ ರೈಲ್ವೆ ಕ್ರಾಸಿಂಗ್ ಆಗುತ್ತಿದ್ದ ಸಂದರ್ಭದಲ್ಲೇ ರೈಲು ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.