ಅತ್ಯಾಚಾರಿಗೆ ಗಲ್ಲು ಶಿಕ್ಷೆ: ಕೇಂದ್ರ ಸಚಿವ ಸಂಪುಟ ಅಸ್ತು

ಅತ್ಯಾಚಾರಿಗೆ ಗಲ್ಲು ಶಿಕ್ಷೆ: ಕೇಂದ್ರ ಸಚಿವ ಸಂಪುಟ ಅಸ್ತು

HSA   ¦    Apr 21, 2018 02:30:44 PM (IST)
ಅತ್ಯಾಚಾರಿಗೆ ಗಲ್ಲು ಶಿಕ್ಷೆ: ಕೇಂದ್ರ ಸಚಿವ ಸಂಪುಟ ಅಸ್ತು

ನವದೆಹಲಿ: ಉನ್ನಾವ್ ಮತ್ತು ಕಥುವಾದಲ್ಲಿ ನಡೆದಿರುವಂತಹ ಅತ್ಯಾಚಾರ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವಂತಹ ಕೇಂದ್ರ ಸರ್ಕಾರವು, ಅಪ್ರಾಪ್ತ ಬಾಲಕಿಯ ಅತ್ಯಾಚಾರಕ್ಕೆ ಗಲ್ಲು ಶಿಕ್ಷೆ ವಿಧಿಸುವ ವಿಧೇಯಕ್ಕೆ ಕೇಂದ್ರ ಸಂಪುಟದ ಒಪ್ಪಿಗೆ ಪಡೆದಿದೆ.

12ರ ಕೆಳಹರೆಯದ ಬಾಲಕಿಯ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸುವ ವಿಧೇಯಕವನ್ನು ಕೇಂದ್ರ ಸಂಪುಟವು ಜಾರಿಗೊಳಿಸಿದೆ. ಇದರಿಂದ ಇನ್ನು ಮುಂದೆ ಅತ್ಯಾಚಾರ ವಿರುದ್ಧದ ಪ್ರಕರಣಗಳಿಗೆ ಗಂಭೀರ ಶಿಕ್ಷೆ ಘೋಷಿಸಲಾಗಿದೆ.

ಅತ್ಯಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಅಪ್ರಾಪ್ತ ಬಾಲಕಿಯರ ಅತ್ಯಾಚಾರಗೈದರೆ ಅಪರಾಧಿಗೆ ಕೇವಲ ಏಳು ವರ್ಷ ಜೈಲು ಶಿಕ್ಷೆ ನೀಡಲಾಗುತ್ತಿತ್ತು.