ವರ್ಗಾವಣೆಯಲ್ಲೂ ಐಎಎಸ್ ಅಧಿಕಾರಿ ಖೇಮ್ಕಾ ದಾಖಲೆ

ವರ್ಗಾವಣೆಯಲ್ಲೂ ಐಎಎಸ್ ಅಧಿಕಾರಿ ಖೇಮ್ಕಾ ದಾಖಲೆ

Nov 13, 2017 02:14:39 PM (IST)
ವರ್ಗಾವಣೆಯಲ್ಲೂ ಐಎಎಸ್ ಅಧಿಕಾರಿ ಖೇಮ್ಕಾ ದಾಖಲೆ

ಚಂಢೀಗಡ: ರಾಬರ್ಟ್ ವಾದ್ರಾ ಭೂಹಗರಣವನ್ನು ಹೊರಜಗತ್ತಿನ ಮುಂದಿಟ್ಟಾಗ ಯುಪಿಎ ಸರ್ಕಾರದಿಂದ ವರ್ಗಾವಣೆಗೆ ಒಳಗಾಗಿದ್ದ ಐಎಎಸ್ ಅಧಿಕಾರಿ ಅಶೋಕ್ ಖೇಮ್ಕಾ ಅವರನ್ನು ಬಿಜೆಪಿ ಸರ್ಕಾರ ಕೂಡ ವರ್ಗಾವಣೆ ಮಾಡಿದೆ.

ತನ್ನ ಕರ್ತವ್ಯದ ವರ್ಷಗಳಲ್ಲಿ 46ನೇ ಸಲ ಖೇಮ್ಕಾ ವರ್ಗಾವಣೆಗೆ ಒಳಗಾಗಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಖೇಮ್ಕಾ, ಎಷ್ಟೊಂದು ಕೆಲಸಗಳನ್ನು ಯೋಜಿಸಲಾಗಿತ್ತು. ಮತ್ತೆ ವರ್ಗಾವಣೆ ಸುದ್ದಿ. ಮತ್ತೊಂದು ಕ್ರ್ಯಾಶ್ ಲ್ಯಾಂಡಿಂಗ್, ಸ್ಥಾಪಿತ ಹಿತಾಸಕ್ತಿಗಳು ಗೆದ್ದಿವೆ. ಇದು ತಾತ್ಕಾಲಿಕ. ಮತ್ತಷ್ಟು ಹುಮ್ಮಸ್ಸಿನಿಂದ ಕೆಲಸ ಮಾಡುತ್ತೇವೆ ಎಂದು ಬರೆದಿದ್ದಾರೆ.

ಖೇಮ್ಕಾ ಅವರು ಹರಿಯಾಣದ ಬಿಜೆಪಿ ಸರ್ಕಾರದಲ್ಲಿ ಕ್ರೀಡಾ ಸಚಿವ ಅನಿಲ್ ವಿಜ್ ಅವರಡಿಯಲ್ಲಿ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಮುಖ್ಯ ಕಾರ್ಯದರ್ಶಿಯಾಗಿದ್ದರು.

ಖೇಮ್ಕಾ 23 ವರ್ಷಗಳ ಕರ್ತವ್ಯ ಅವಧಿಯಲ್ಲಿ 45 ಬಾರಿ ವರ್ಗಾವಣೆಗೊಂಡಿದ್ದರು. ಇದು ಅವರ ದಾಖಲೆಯ 46ನೇ ವರ್ಗಾವಣೆಯಾಗಿದೆ. ಖೇಮ್ಕಾ ಹೆಚ್ಚು ಸಲ ವರ್ಗಾವಣೆಯಾದ ಅಧಿಕಾರಿಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಹರ್ಯಾಣದ ಅಧಿಕಾರಿ ಪ್ರದೀಪ್ ಕಸಂಜ್ 68 ಸಲ ವರ್ಗಾವಣೆಗೊಂಡಿದ್ದಾರೆ.