ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿಯಾಗಿ ಯಚೂರಿ ಮರುಆಯ್ಕೆ

ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿಯಾಗಿ ಯಚೂರಿ ಮರುಆಯ್ಕೆ

HSA   ¦    Apr 22, 2018 04:38:28 PM (IST)
ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿಯಾಗಿ ಯಚೂರಿ ಮರುಆಯ್ಕೆ

ನವದೆಹಲಿ: ಸಿಪಿಐ(ಎಂ) ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಸೀತಾರಾಮ ಯಚೂರಿ ಅವರು ಎರಡನೇ ಅವಧಿಗೆ ಆಯ್ಕೆಯಾಗಿದ್ದಾರೆ.

ಹೈದರಾಬಾದ್ ನಲ್ಲಿ ನಡೆದ ಪಕ್ಷದ 22ನೇ ಕಾಂಗ್ರೆಸ್ ನಲ್ಲಿ ಅವರು ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಇದರಿಂದ ಮುಂದಿನ ಲೋಕಸಭಾ ಚುನಾವಣೆಗೆ ಪಕ್ಷದ ತಂತ್ರಗಳಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ.

ಸಿಪಿಐ(ಎಂ) ಪಕ್ಷದ 95 ಸದಸ್ಯರ ಕೇಂದ್ರೀಯ ಸಮಿತಿಯು ಯಚೂರಿ ಅವರ ಆಯ್ಕೆಯನ್ನು ಅನುಮೋದಿಸಿದರು. ಯಚೂರಿ 2015ರಲ್ಲಿ ವಿಶಾಖಪಟ್ಟಣಂನಲ್ಲಿ ನಡೆದ ಪಕ್ಷದ 21ನೇ ಕಾಂಗ್ರೆಸ್ ನಲ್ಲಿ ಪ್ರಕಾಶ್ ಕಾರಟ್ ಅವರಿಂದ ಈ ಹುದ್ದೆಯನ್ನು ಪಡೆದಿದ್ದರು.

ನಾವು ಈ ಕಾಂಗ್ರೆಸ್ ನಲ್ಲಿ ಕೆಲವೊಂದು ಮಹತ್ವದ ವಿಚಾರಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ಸಿಪಿಐ(ಎಂ) ಒಗ್ಗಟ್ಟಿನ ಪಕ್ಷವೆಂದು ನಮ್ಮ ಎದುರಾಳಿಗಳಿಗೆ ಸಂದೇಶ ರವಾನೆಯಾಗಿದೆ ಎಂದು ಯಚೂರಿ ತಿಳಿಸಿದರು.