ಕಾವೇರಿ ನದಿ ನೀರು ಹಂಚಿಕೆ ವಿವಾದ: 2,480 ಕೋಟಿ ರೂ. ಪರಿಹಾರ ಕೇಳಿದ ತಮಿಳುನಾಡು

ಕಾವೇರಿ ನದಿ ನೀರು ಹಂಚಿಕೆ ವಿವಾದ: 2,480 ಕೋಟಿ ರೂ. ಪರಿಹಾರ ಕೇಳಿದ ತಮಿಳುನಾಡು

Jan 09, 2017 04:03:47 PM (IST)

ಚೆನ್ನೈ:ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಆದೇಶ ನೀಡಿದ ಬಳಿಕವೂ ನೀರು ಬಿಡದ ಕಾರಣಕ್ಕೆ ಕರ್ನಾಟಕ ರಾಜ್ಯ ರು.2,480 ಕೋಟಿ ಹಣವನ್ನು ಪರಿಹಾರ ಹಣವನ್ನು ನೀಡಬೇಕೆಂದು ತಮಿಳುನಾಡು ಸರ್ಕಾರ ಸೋಮವಾರ ಆಗ್ರಹಿಸಿದೆ.

ಕಾವೇರಿ ವಿವಾದ ಸಂಬಂಧ ಈ ಹಿಂದೆ ಸುಪ್ರೀಂಕೋರ್ಟ್ ನೇತೃತ್ವದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾಯಮೂರ್ತಿ ಅಮಿತವ ರಾಯ್ ಮತ್ತು ನ್ಯಾಯಮೂರ್ತಿ ಎ.ಎಂ.ಖಾನ್ವಿಲ್ಕರ್ ಅವರಿದ್ದ ತ್ರಿಸದಸ್ಯ ಪೀಠ ಮಧ್ಯಂತರ ಆದೇಶವನ್ನು ನೀಡಿತ್ತು. ಮುಂದಿನ ಆದೇಶದವರೆಗೂ ಕರ್ನಾಟಕ ರಾಜ್ಯ ತಮಿಳುನಾಡಿಗೆ ಪ್ರತೀನಿತ್ಯ 2 ಸಾವಿರ ಕ್ಯೂಸೆಕ್ಟ್ ನೀರನ್ನು ಬಿಡುಗಡೆ ಮಾಡುವಂತೆ ತಿಳಿಸಿತ್ತು.

ಈ ವೇಳೆ ವಾದ ಮಂಡಿಸಿದ್ದ ತಮಿಳುನಾಡು ರಾಜ್ಯ ಪರ ವಕೀಲ ಶೇಖರ್ ನಪಾಡೆ ಅವರು, ವಿವಾದ ಸಂಬಂಧ ಸತತ ವಿಚಾರಣೆ ನಡೆಸಿ ತಾರ್ಕಿಕ ಅಂತ್ಯ ಹೇಳುವಂತೆ ಸುಪ್ರೀಂ ಬಳಿ ಮನವಿ ಮಾಡಿಕೊಂಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ನ್ಯಾಯಾಲಯ ಫೆಬ್ರವರಿ 7 ರ ಬಳಿಕ ಮುಂದಿನ ಮೂರು ವಾರಗಳ ಕಾಲ ವಿವಾದ ಬಗೆಹರಿಕೆಗಾಗಿ ಪ್ರತೀ ದಿನ ಮಧ್ಯಾಹ್ನ 2 ಗಂಟೆಗೆ ವಿಚಾರಣೆ ನಡೆಸಲಾಗುವುದು ಎಂದು ಹೇಳಿತ್ತು. ಇದೀಗ ತಮಿಳುನಾಡು ಸರ್ಕಾರ ಕರ್ನಾಟಕ ರಾಜ್ಯ 2,480 ಕೋಟಿ ರೂ ಪರಿಹಾರ ನಿಡಬೇಕೆಂದು ಕೇಳಿಕೊಂಡಿದೆ.