48 ಸಾವಿರ ಕೋಟಿ ರೂಪಾಯಿ ಮೌಲ್ಯದ ಯುದ್ಧ ವಿಮಾನಗಳ ಒಪ್ಪಂದಕ್ಕೆ ಗ್ರೀನ್ ಸಿಗ್ನಲ್

48 ಸಾವಿರ ಕೋಟಿ ರೂಪಾಯಿ ಮೌಲ್ಯದ ಯುದ್ಧ ವಿಮಾನಗಳ ಒಪ್ಪಂದಕ್ಕೆ ಗ್ರೀನ್ ಸಿಗ್ನಲ್

MS   ¦    Jan 13, 2021 07:29:12 PM (IST)
48 ಸಾವಿರ ಕೋಟಿ ರೂಪಾಯಿ ಮೌಲ್ಯದ ಯುದ್ಧ ವಿಮಾನಗಳ ಒಪ್ಪಂದಕ್ಕೆ ಗ್ರೀನ್ ಸಿಗ್ನಲ್

ನವದೆಹಲಿ: 'ಆತ್ಮನಿರ್ಭರ್ ಭಾರತ್' ಸಂಕಲ್ಪದೊಂದಿಗೆ ದೇಶಿಯ ಫೈಟರ್ ಜೆಟ್​ ​'LCA-Tejas ಯುದ್ಧ ವಿಮಾನಗಳನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಸುಮಾರು 48 ಸಾವಿರ ಕೋಟಿ ರೂಪಾಯಿ ಮೌಲ್ಯದ ಒಪ್ಪಂದಕ್ಕೆ ಅನುಮೋದನೆ ನೀಡಿದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಿಸಿಎಸ್​ (ಕ್ಯಾಬಿನೆಟ್​ ಕಮಿಟಿ ಆನ್ ಸೆಕ್ಯೂರಿಟಿ) ಸಭೆ.

ಈ ಬಗ್ಗೆ ಸರಣಿ ಟ್ವೀಟ್​ಗಳನ್ನ ಮಾಡಿ ಮಾಹಿತಿ ಹಂಚಿಕೊಂಡಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್, ದೇಶದಲ್ಲಿನ ಅತೀ ದೊಡ್ಡ ರಕ್ಷಣಾ ಖರೀದಿ ಒಪ್ಪಂದ ಇದಾಗಿದ್ದು, 'ಈ ಒಪ್ಪಂದ ದೇಶದ ರಕ್ಷಣಾ ಉತ್ಪಾದನೆಯಲ್ಲಿ ಸ್ವಾವಲಂಬನೆಯಾಗಲು ಹಾಗೂ ಗೇಮ್ ಚೇಂಜರ್ ಆಗಿ ಬದಲಾಗಲಿದೆ' ಎಂದು ಅಭಿಪ್ರಾಯಪಟ್ಟಿದ್ದಾರೆ.

ದೇಶದ ರಕ್ಷಣಾ ವ್ಯವಸ್ಥೆಗೆ ತನ್ನದೆಯಾದ ಕೊಡುಗೆಯನ್ನ ನೀಡುತ್ತಿರುವ ಹೆಚ್ಎಎಲ್ (ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್), ಈಗಾಗಲೇ ಬೆಂಗಳೂರು ಹಾಗೂ ನಾಸಿಕ್ನಲ್ಲಿ ತನ್ನ ಉತ್ಪಾದನಾ ಕೇಂದ್ರಗಳನ್ನ ಸ್ಥಾಪನೆ ಮಾಡಿದೆ. ದೇಶದ ವಾಯುಸೇನೆಗೆ LCA-Tejas ಮುಂಬರುವ ವರ್ಷಗಳಲ್ಲಿ ಬೆನ್ನೆಲುಬಾಗಿ ನಿಲ್ಲಲಿದ್ದು, ಮುಂದೆ ಸಿಗುವ ತೇಜಸ್​ ಫೈಟರ್​​ಗಳು ಆತ್ಯಾಧುನಿಕ ತಂತ್ರಜ್ಞಾನವನವು ಅದಕ್ಕೆ ಸಾಥ್ ನೀಡಲಿದೆ. ಇದಕ್ಕಾಗಿ ಭಾರತ ಈ ಹಿಂದೆ ಯಾವತ್ತೂ ಇಂತಹದೊಂದು ಪ್ರಯತ್ನಕ್ಕೆ ಮುಂದಾಗಿರಲಿಲ್ಲ. ಸ್ವದೇಶಿ ತೇಜಸ್​ ಯುದ್ಧವಿಮಾನದ ಸಾಮರ್ಥ್ಯವನ್ನ ಮತ್ತಷ್ಟು ರೂಪಾಂತರ ಮಾಡಿ ಅದರ ಸಾಮರ್ಥ್ಯವನ್ನ ಹೆಚ್ಚಿಸಲಾಗುವುದು ಇದರ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ.