ಮೃಗಾಲಯದ 8 ಸಿಂಹಗಳಲ್ಲಿ ಕೊರೊನಾ ಸೋಂಕು ದೃಢ

ಮೃಗಾಲಯದ 8 ಸಿಂಹಗಳಲ್ಲಿ ಕೊರೊನಾ ಸೋಂಕು ದೃಢ

Ms   ¦    May 04, 2021 03:32:38 PM (IST)
ಮೃಗಾಲಯದ 8 ಸಿಂಹಗಳಲ್ಲಿ ಕೊರೊನಾ ಸೋಂಕು ದೃಢ

ಹೈದರಾಬಾದ್ : ಇವರಿಗೂ ಕೇವಲ ಮನುಷ್ಯರಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದ ಕೊರೊನಾ ಸೋಂಕು ಇದೀಗ ಪ್ರಾಣಿಗಳಲ್ಲಿ ಕಾಣಿಸಿಕೊಳ್ಳುತ್ತದೆ. ಹೌದು, ಮುತ್ತಿನ ನಗರಿ ಹೈದರಾಬಾದ್ ನಲ್ಲಿರುವ ಮೃಗಾಲಯದಲ್ಲಿ ಕೊರೋನಾ ಸೋಂಕು ಪ್ರಾಣಿಗಳಿಗೂ ಹಬ್ಬಿದೆ . 

 

ಎಂಟು ಸಿಂಹಗಳಲ್ಲಿ ಕೊರೋನಾ ಸೋಂಕಿನ ಲಕ್ಷಣ ದೃಢಪಟ್ಟಿದೆ . ಕೊರೋನಾ ಹಿನ್ನೆಲೆಯಲ್ಲಿ ಈಗಾಗಲೇ ಮೃಗಾಲಯಕ್ಕೆ ಪ್ರವಾಸಿಗರ ಭೇಟಿಯನ್ನು ನಿರ್ಬಂಧಿಸಲಾಗಿದೆ . ಅಷ್ಟೇ ಅಲ್ಲದೆ, ಅಗತ್ಯ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಮೃಗಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

 

 ಕಳೆದ ವಾರ ಕೇಂದ್ರ ಪರಿಸರ ಇಲಾಖೆ ಪ್ರಾಣಿಗಳ ಮೂಲಕ ಕೂಡ ಕೊರೋನಾ ಸೋಂಕು ಹರಡುವ ಬಗ್ಗೆ ರಾಜ್ಯಗಳಿಗೆ ಎಚ್ಚರಿಕೆ ನೀಡಿತ್ತು . ಅಭಯಾರಣ್ಯ ಸೇರಿದಂತೆ ಎಲ್ಲ ಪ್ರದೇಶಗಳಲ್ಲಿ ಜನರ ಓಡಾಟದ ಮೇಲೆ ನಿರ್ಬಂಧ ಹೇರುವಂತೆ ಸೂಚಿಸಿತ್ತು.