News Kannada
Friday, January 27 2023

ದೇಶ

ದಲೈ ಲಾಮಾ ಹುಟ್ಟು ಹಬ್ಬ ಆಚರಣೆಗೆ ಚೀನಿ ಸೈನಿಕರ ಅಡ್ಡಿ

Photo Credit :

ನವ ದೆಹಲಿ ; ಕಳೆದ ಜುಲೈ 6ರಂದು ನಡೆದ ಟಿಬೆಟಿಯನ್ ಧರ್ಮಗುರು ದಲೈ ಲಾಮಾ ಅವರ ಹುಟ್ಟುಹಬ್ಬದ ಆಚರನೆಗೆ ಚೀನಾದ ಸೈನಿಕರು ಅಡ್ಡಿಪಡಿಸಿದ ಘಟನೆ ನಡೆದಿದೆ. ಭಾರತ ಚೀನಾ ಗಡಿ ಭಾಗದ ಎಲ್‌ಏಸಿ ಯ ಡೆಮ್ಚುಕ ಹಳ್ಳಿಯಲ್ಲಿ ಭಾರತೀಯ ಹಳ್ಳಿಗರು ದಲೈ ಲಾಮಾ ಅವರ ಜನ್ಮದಿನದ ಸಂಭ್ರಮದಲ್ಲಿ ಇದ್ದರು. ಅದೇ ವೇಳೆ ಆಗಮಿಸಿದ ಚೀನಾ ಸೈನಿಕರು ಮತ್ತು ಒಂದಷ್ಟು ಮಂದಿ ನಾಗರಿಕರು ಪ್ರತಿಭಟನಾತ್ಮಕ ಬ್ಯಾನರ್​ಗಳನ್ನು ಮತ್ತು ಚೀನಾದ ಧ್ವಜವನ್ನು ಪ್ರದರ್ಶಿಸಿದ್ದಾರೆ.
ಡೆಮ್ಚುಕ್​ ಪ್ರದೇಶದ ಹಲವು ಹಳ್ಳಿಗಳಲ್ಲಿ ಜನರು ದಲೈ ಲಾಮಾರ ಜನ್ಮದಿನ ಆಚರಿಸುತ್ತಿದ್ದರು. ಆ ವೇಳೆ ಒಟ್ಟು 5 ವಾಹನಗಳಲ್ಲಿ ಆಗಮಿಸಿದ ಚೀನಾ ಸೈನಿಕರು ಮತ್ತೊಂದಷ್ಟು ಮಂದಿ ನಾಗರಿಕರು ಹಳ್ಳಿಗಳ ಸಮುದಾಯ ಕೇಂದ್ರದ ಬಳಿ ಈ ಬ್ಯಾನರ್​, ಧ್ವಜಗಳನ್ನು ಪ್ರದರ್ಶಿಸಿದ್ದಾರೆ. ದಲೈ ಲಾಮಾ ಹುಟ್ಟುಹಬ್ಬಕ್ಕೆ ಚೀನಾದ ಸೈನಿಕರು ಅಡಚಣೆ ಮಾಡಿರುವ ಪ್ರಕರಣ ಈಗ ಬೆಳಕಿಗೆ ಬಂದಿದೆ.ಜುಲೈ 6ರಂದು ಟಿಬೆಟಿಯನ್ ಧರ್ಮಗುರು ದಲೈ ಲಾಮಾ ಹುಟ್ಟುಹಬ್ಬ ಇತ್ತು. ಹೀಗಾಗಿ ಲಡಾಖ್​​ನ ಹಲವು ಹಳ್ಳಿಗಳ ಜನರು ಅದನ್ನು ಪ್ರತಿವರ್ಷದಂತೆ ಸಂಭ್ರಮದಿಂದ ಆಚರಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರೂ ಸಹ ಅಂದು ಟ್ವೀಟ್ ಮಾಡಿ ದಲೈ ಲಾಮಾ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ನಾನು ಫೋನಿನಲ್ಲಿ ದಲೈ ಲಾಮಾ ಅವರೊಂದಿಗೆ ಮಾತನಾಡಿ ಶುಭ ಹಾರೈಸಿದ್ದೇನೆ. ಅವರ ಆಯುರಾರೋಗ್ಯಕ್ಕಾಗಿ ಪ್ರಾರ್ಥಿಸುತ್ತೇನೆ ಎಂದು ನರೇಂದ್ರ ಮೋದಿ ಟ್ವೀಟ್ ಮಾಡಿದ್ದರು. ಈ ಮೂಲಕ ತಾವು ದಲೈ ಲಾಮಾ ಅವರೊಂದಿಗೆ ಮಾತುಕತೆ ನಡೆಸುವದನ್ನು ಇದೇ ಮೊದಲ ಬಾರಿಗೆ ಬಹಿರಂಗ ಪಡಿಸಿದ್ದಾರೆ.
ಭಾರತ ಮತ್ತು ಚೀನಾ ನಡುವೆ ಕಳೆದ ವರ್ಷ ಏಪ್ರಿಲ್​​ ತಿಂಗಳಿಂದಲೂ ಒಂದಲ್ಲ ಒಂದು ವಿಚಾರಕ್ಕೆ ಸಂಘರ್ಷ ಏರ್ಪಡುತ್ತಲೇ ಇದೆ. ಅದರಲ್ಲೂ ಚೀನಾದ ಸೈನಿಕರ ದಾಳಿಯಲ್ಲಿ ಭಾರತ 20 ಯೋಧರು ಹುತಾತ್ಮರಾದ ನಂತರ ಈ ಸಂಘರ್ಷ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಲೇ ಇದೆ. ಎರಡೂ ದೇಶಗಳ ನಡುವೆ ಹಲವು ಸುತ್ತಿನ ಮಿಲಿಟರಿ ಮಟ್ಟದ ಮಾತುಕತೆಗಳು ನಡೆದಿದ್ದರೂ ಒಂದಲ್ಲ ಒಂದು ಹಂತದಲ್ಲಿ ಮತ್ತೆ ಸಂಘರ್ಷ ಏರ್ಪಡುತ್ತಿದೆ.

See also  ವಿಶ್ವ ನಾಯಕರ ಮೆಚ್ಚುಗೆಗೆ ಪಾತ್ರವಾದ ಭಾರತ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

145
Editor's Pick

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು