NewsKarnataka
Saturday, July 31 2021

ಮುಂಬೈ

ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್‌ ದೇಶ್‌ ಮುಖ್‌ ಆಸ್ತಿ ಮುಟ್ಟುಗೋಲು

ಮುಂಬೈ ; ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶ್​ಮುಖ್ ಅವರಿಗೆ ಸೇರಿದ ₹4.20 ಕೋಟಿ ಮೌಲ್ಯದ ಆಸ್ತಿಯನ್ನ ಜಾರಿ ನಿರ್ದೇಶನಾಲಯ ಸೀಜ್ ಮಾಡಿದೆ. ಈ ಮೂಲಕ ಅನಿಲ್ ದೇಶ್​ಮುಖ್​ಗೆ ಮತ್ತೆ ಸಂಕಷ್ಟ ಎದುರಾದಂತಾಗಿದೆ.
ಅನಿಲ್ ದೇಶ್​ಮುಖ್ ವಿರುದ್ಧ ಅಕ್ರಮ ಹಣ ಸಂಪಾದನೆ ಆರೋಪ ಕೇಳಿಬಂದ ಹಿನ್ನೆಲೆ ಜಾರಿ ನಿರ್ದೇಶನಾಲಯ ಅನಿಲ್ ದೇಶ್​ಮುಖ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಮೂರು ಬಾರಿ ಸಮನ್ಸ್ ಕಳುಹಿಸಿತ್ತು, ಆದ್ರೆ ಅನಿಲ್ ದೇಶ್​ಮುಖ್​ ಮೂರು ಬಾರಿಯೂ ವಿಚಾರಣೆಗೆ ಹಾಜರಾಗದ ಹಿನ್ನೆಲೆ ಜಾರಿ ನಿರ್ದೇಶನಾಲಯ ಈ ಕ್ರಮ ತೆಗೆದುಕೊಂಡಿದೆ ಎನ್ನಲಾಗಿದೆ.ಅನಿಲ್ ದೇಶ್​ಮುಖ್ ಮಾತ್ರವಲ್ಲದೇ ಅವರ ಪುತ್ರ ಹೃಷಿಕೇಶ್ ಹಾಗೂ ಪತ್ನಿಗೂ ಸಹ ಫೆಡರಲ್ ಪ್ರೋಬ್ ಏಜೆನ್ಸಿ ಸಮನ್ಸ್ ಕಳುಹಿಸಿತ್ತು. ಆದ್ರೆ ಇವರೂ ಸಹ ವಿಚಾರಣೆಗೆ ಗೈರುಹಾಜರಾಗಿದ್ದಾರೆ. ಮಹಾರಾಷ್ಟ್ರ ಪೊಲೀಸರಿಗೆ ತಿಂಗಳಿಗೆ ₹100 ಕೋಟಿ ಹಣ ಸಂಗ್ರಹಿಸುವಂತೆ ಅನಿಲ್ ದೇಶ್​ಮುಖ್​ ಸೂಚಿಸಿದ್ದರು ಎನ್ನಲಾದ ಪ್ರಕರಣದಲ್ಲಿ ಅನಿಲ್ ದೇಶ್​ಮುಖ್ ಅವರಿಗೆ ಸಮನ್ಸ್ ಕಳುಹಿಸಲಾಗಿತ್ತು.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

Leave a Reply

Your email address will not be published. Required fields are marked *

Subscribe to our Brand New YouTube Channel

Subscribe Newsletter

Get latest news karnataka updates on your email.