News Kannada
Thursday, December 08 2022

ದೇಶ

ಕೋವಿಡ್‌ ನಿರೋಧಕ ಲಸಿಕೆಯ ಪ್ರಮಾಣ ಪತ್ರ ಇನ್ನೂ ವಾಟ್ಸ್‌ಆ್ಯಪ್‌ನಲ್ಲಿ ಲಭ್ಯ

Photo Credit :

ನವದೆಹಲಿ: ಕೋವಿಡ್‌ ನಿರೋಧಕ ಲಸಿಕೆ ಪಡೆದ ನಾಗರಿಕರು ಇನ್ನು ಮುಂದೆ ವಾಟ್ಸ್‌ಆ್ಯಪ್‌ ಮೂಲಕವೇ ಕೆಲವೇ ಸೆಕೆಂಡ್‌ಗಳಲ್ಲಿ ಪ್ರಮಾಣಪತ್ರ ಪಡೆದುಕೊಳ್ಳಬಹುದು ಎಂದು ಕೇಂದ್ರ ಆರೋಗ್ಯ ಸಚಿವರ ಕಚೇರಿ ತಿಳಿಸಿದೆ.

ವಾಟ್ಸ್‌ಆ್ಯಪ್‌ ಸಂಖ್ಯೆ +91-9013151515 ಅನ್ನು ಮೊಬೈಲ್‌ನಲ್ಲಿ ’ಸೇವ್‌’ ಮಾಡಿಕೊಳ್ಳಬೇಕು. ನಂತರ, ‘covid certificate’ ಎಂದು ವಾಟ್ಸ್‌ಆ್ಯಪ್‌ ಮೂಲಕವೇ ಸಂದೇಶ ಕಳುಹಿಸಬೇಕು.

ಈ ಸಂದೇಶ ಕಳುಹಿಸಿದ ತಕ್ಷಣ ಮೊಬೈಲ್‌ಗೆ ‘ಒಟಿಪಿ’ ಬರಲಿದೆ. ‘ಒಟಿಪಿ’ ನಮೂದಿಸಿದರೆ ಕೆಲವೇ ಸೆಕೆಂಡ್‌ಗಳಲ್ಲಿ ವಾಟ್ಸ್‌ಆ್ಯಪ್‌ನಲ್ಲಿ ಪ್ರಮಾಣಪತ್ರ ಲಭ್ಯವಾಗಲಿದೆ.

ಸದ್ಯ ಕೋವಿನ್‌ ಪೋರ್ಟಲ್‌ ಮೂಲಕ ಪ್ರಮಾಣಪತ್ರ ಪಡೆದುಕೊಳ್ಳುವ ವ್ಯವಸ್ಥೆ ಇದೆ.

See also  ಜೈಪುರ: ಸಿಡಿಲು ಬಡಿದು 11 ಮಂದಿ ದಾರುಣ ಸಾವು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

149

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು