News Kannada
Tuesday, December 06 2022

ದೇಶ

ಪತ್ನಿಗೆ ವಿಚ್ಚೇದನ ನೀಡಬಹುದು ಮಕ್ಕಳಿಗಲ್ಲ ಎಂದ ಸುಪ್ರೀಂ ಕೋರ್ಟ್‌

Photo Credit :

ನವದೆಹಲಿ, ;ಪತ್ನಿಗೆ ವಿಚ್ಛೇದನ ನೀಡಬಹುದು. ಆದರೆ, ಮಕ್ಕಳಿಗೆ ವಿಚ್ಛೇದನ ನೀಡುವುದು ಸಾಧ್ಯವಿಲ್ಲ ಎಂದು ವಿಚ್ಛೇದನ ಪ್ರಕರಣವೊಂದರ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ ತಿಳಿಸಿದೆ. ಸಂವಿಧಾನ ವಿಧಿ-142ರಡಿ ದಂಪತಿಗೆ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ನೀಡಿದ ಸುಪ್ರೀಂಕೋರ್ಟ್ ನ್ಯಾಯಾಧೀಶರಾದ ಬಿ.ವೈ.ಚಂದ್ರಚೂಡ್ ಮತ್ತು ಎಂ.ಆರ್.ಶಾ ಅವರನ್ನೊಳಗೊಂಡ ನ್ಯಾಯಪೀಠ ಒಪ್ಪಂದದ ದಂಪತಿಗಳು ಪರಿಹಾರದ ಷರತ್ತುಗಳಿಗೆ ಬದ್ಧರಾಗಿರಬೇಕು. ಮಕ್ಕಳ ಉಸ್ತುವಾರಿ, ಆರೈಕೆಗೆ ಆರು ವಾರಗಳೊಳಗಾಗಿ 4 ಕೋಟಿ ಪರಿಹಾರವನ್ನು ಪತಿ ಪತ್ನಿಗೆ ನೀಡಬೇಕು ಎಂದು ಹೇಳಿದೆ.
ವಿಚಾರಣೆ ವೇಳೆ ಪತಿ ಪರ ವಕೀಲ ಸಂಧಾನ ಪ್ರಕ್ರಿಯೆ ಎರಡೂ ಹಂತಗಳಲ್ಲಿ ಎರಡೂ ಕಡೆಯ ಮಧ್ಯೆ ಒಪ್ಪಿಗೆಗೆ ಬರಲಾಗಿದ್ದು, ಪತ್ನಿಗೆ ಪರಿಹಾರವಾಗಿ 4 ಕೋಟಿ ರೂ. ನೀಡಲು ಸಮಯಾವಕಾಶ ಬೇಕು. ಕೋವಿಡ್ ಸಾಂಕ್ರಾಮಿಕದಿಂದ ವ್ಯಾಪಾರ-ವಹಿವಾಟಿನ ಮೇಲೆ ಹೊಡೆತ ಬಿದ್ದಿದೆ ಎಂದು ಪತಿ ಪರ ವಕೀಲ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡರು. ವಿವಾಹ ವಿಚ್ಛೇದನ ಇತ್ಯರ್ಥದ ಸಮಯದಲ್ಲಿ ಪರಿಹಾರ ನೀಡುವುದಾಗಿ ಈ ಹಿಂದೆ ತಾವು ಒಪ್ಪಿಕೊಂಡಿದ್ದೀರಿ. ಈಗ ನೀವು 4 ಕೋಟಿ ರೂ. ಪರಿಹಾರ ನೀಡಲೇಬೇಕು. ಸಮಯಾವಕಾಶ ಕೇಳುತ್ತಿರುವುದು ಸರಿಯಲ್ಲ ಎಂದು ನ್ಯಾಯಪೀಠ ಹೇಳಿದೆ.

See also  ಕೋವಿಡ್‌ ಸಂಕಷ್ಟ: ದುಡ್ಡಿಲ್ಲವೆಂದು ʻಮಜಾಭಾರತʼ ಕಲಾವಿದನನ್ನು ಬಿಟ್ಟು ಹೋದ ಪತ್ನಿ!
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು