ಪ್ಯಾರಾಲಿಂಪಿಕ್ಸ್ : ಇಂದು ಪ್ಯಾರಾಲಿಂಪಿಕ್ಸ್ ನ ಕ್ರೀಡಾಪಟುಗಳನ್ನು ಪ್ರಧಾನಿ ಮೋದಿ ಭೇಟಿಯಾಗಿದ್ದು, ನೀವು ನಮ್ಮ ದೇಶದ ರಾಯಭಾರಿಗಳು ಎಂದು ಹೇಳಿದ್ದಾರೆ. ಟೋಕಿಯೋ ಒಲಂಪಿಕ್ಸ್ ನಲ್ಲಿ ಐತಿಹಾಸಿಕ ಸಾಧನೆಗೈದ ಕ್ರೀಡಾಪಟುಗಳಿಗೆ ಅಭಿನಂದನೆ ಸಲ್ಲಿಸಿದರು. ಕ್ರೀಡಾಕೂಟದಲ್ಲಿ ಅವರಲ್ಲಿದ್ದ ಚೈತನ್ಯ ಹಾಗೂ ಇಚ್ಛಾಶಕ್ತಿಯ ಬಗ್ಗೆ ಪ್ರಧಾನಿ ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ.
ಕ್ರೀಡಾಕೂಟದಲ್ಲಿ ಪದಕಗಳಿಸದಿರುವ ಕ್ರೀಡಾಪಟುಗಳಿಗೆ ಮನಸ್ಥೈರ್ಯ ತುಂಬಿದ ಪ್ರಧಾನಿ ಮೋದಿ, ನಿಜವಾದ ಕ್ರೀಡಾಪಟು ಸೋಲು- ಗೆಲುವಿನ ಬಗ್ಗೆ ಚಿಂತಿಸುವುದಿಲ್ಲ. ಬದಲಿಗೆ ಮುನ್ನುಗ್ಗಿ ಹೋರಾಡುತ್ತಾನೆ.
ನೀವು ನಮ್ಮ ದೇಶದ ರಾಯಭಾರಿಗಳು, ವಿಶ್ವಮಟ್ಟದಲ್ಲಿ ನಿಮ್ಮ ಸಾಧನೆ ಗಮನಾರ್ಹವಾಗಿದ್ದು, ರಾಷ್ಟ್ರದ ಘನತೆ ಹೆಚ್ಚಿಸಿದ್ದೀರಿ ಎಂದು ಕೊಂಡಾಡಿದರು. ತಪಸ್ಸು, ಪುರುಷಾರ್ಥ ಹಾಗೂ ಪರಾಕ್ರಮದ ಮೂಲಕ ಪ್ಯಾರಾಲಿಂಪಿಕ್ಸ್ ನಲ್ಲಿ ಜನರು ತಮ್ಮ ಮೇಲಿರುವ ದೃಷ್ಟಿಕೋನವನ್ನು ಬದಲಾಯಿಸಕೊಳ್ಳುವಂತೆ ಮಾಡಿಕೊಂಡಿದ್ದಾರೆ ಎಂದರು.
ಇದೇ ಸಮಯದಲ್ಲಿ ಎಲ್ಲಾ ಕ್ರೀಡಾಪಟುಗಳು ತಮಗೆ ದೊರೆತ ಸಹಕಾರ, ಬೆಂಬಲ ಹಾಗೂ ಸ್ಫೂರ್ತಿದಾಯಕ ನುಡಿಗಳಿಗೆ ಪ್ರಧಾನಿ ಮೋದಿಯವರನ್ನು ಅಭಿನಂದಿಸಿದರು. ದೇಶದ ಪ್ರಧಾನಿಯೇ ಖುದ್ದು ಕ್ರೀಡಾಪಟುಗಳಿಗೆ ಕರೆ ಮಾಡಿ ಅಭಿನಂದಿಸಿರುವುದನ್ನು ಗಮನಿಸಿದ ಇತರೆ ವಿದೇಶಿ ಕ್ರೀಡಾಪಟುಗಳಿಗೆ ಆಶ್ಚರ್ಯಗೊಂಡರು. ಜೊತೆಗೆ ಸರ್ಕಾರದಿಂದ ಕ್ರೀಡಾಪಟುಗಳಿಗೆ ನೀಡಿದ ವ್ಯವಸ್ಥೆಯನ್ನೂ ಕ್ರೀಡಾಪಟುಗಳು ಪ್ರಶಂಸಿದರು.
ಕೊನೆಯಲ್ಲಿ ಎಲ್ಲಾ ಕ್ರೀಡಾಪಟುಗಳು ತಮ್ಮ ಸಹಿಯೊಂದಿಗೆ ಶಾಲ್ ವೊಂದನ್ನು ಪ್ರಧಾನಿ ಮೋದಿಯವರಿಗೆ ನೀಡಿದ್ದು, ಜೊತೆಗೆ ಹಲವು ಕ್ರೀಡಾಪಟುಗಳು ತಮ್ಮ ಕ್ರೀಡಾ ಉಪಕರಣಗಳ ಮೇಲೆ ತಮ್ಮ ಸಹಿ ಹಾಕಿ ಪ್ರಧಾನಿಗೆ ಉಡುಗೊರೆ ನೀಡಿದರು. ಕ್ರೀಡಾಪಟುಗಳಿಂದ ಪಡೆದ ಈ ಕ್ರೀಡಾ ಉಪಕರಣಗಳನ್ನು ಮುಂದಿನ ದಿನಗಳಲ್ಲಿ ಹರಾಜು ಹಾಕಲಾಗುತ್ತದೆ.