News Kannada
Thursday, December 08 2022

ದೇಶ

ಕೇಂದ್ರ ಸರ್ಕಾರದಿಂದ ಶೀಘ್ರ ಲಸಿಕೆ ಪರಿಣಾಮದ ಟ್ರ್ಯಾಕರ್ ಬಿಡುಗಡೆ

Photo Credit :

ನವದೆಹಲಿ: ಕೊರೊನಾ ಲಸಿಕೆಯ ವಿಚಾರದಲ್ಲಿ ಆರಂಭದಿಂದಲೇ ಭಿನ್ನಭಿಪ್ರಾಯಗಳು ಕೇಳಿ ಬರುತ್ತಿವೆ. ಅದ್ದರಿಂದ ಕೇಂದ್ರ ಸರಕಾರವು ಈ ಬಗ್ಗೆ ಅಧ್ಯಯನ ನಡೆಸುವ ಸಲುವಾಗಿ ದೇಶದಲ್ಲಿ ಕೊರೋನಾ ನಿಯಂತ್ರಣಕ್ಕೆ ನೀಡಲಾಗುತ್ತಿರುವ ಕೋವಿಡ್‌ ಲಸಿಕೆಗಳು ಎಷ್ಟುಪರಿಣಾಮಕಾರಿ ಎಂದು ಲೆಕ್ಕಾಚಾರ ಮಾಡಬಹುದಾದ ವೆಬ್‌ಸೈಟ್‌ ಚಾಲನೆಗೆ ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ.
ಕೋವಿಡ್‌ನಿಂದ ಸಾವಿಗೀಡಾದವರನ್ನು ಲಸಿಕೆ ಪಡೆಯದವರು, ಒಂದು ಡೋಸ್‌ ಲಸಿಕೆ ಪಡೆದವರು ಮತ್ತು 2 ಡೋಸ್‌ ಲಸಿಕೆ ಪಡೆದವರು ಎಂಬ 3 ವಿಭಾಗದಲ್ಲಿ ವಿಭಾಗಿಸುತ್ತದೆ. ಇದರಿಂದಾಗಿ ಲಸಿಕೆ ಪಡೆದಿದ್ದಾಗ್ಯೂ ಎಷ್ಟುಮಂದಿ ಕೋವಿಡ್‌ಗೆ ಬಲಿಯಾಗಿದ್ದಾರೆ ಎಂಬ ಸ್ಪಷ್ಟಮಾಹಿತಿ ನೀಡುತ್ತದೆ. ಇದರಿಂದ ಲಸಿಕೆಗಳು ಎಷ್ಟುಪರಿಣಾಮಕಾರಿ ಎಂಬುದನ್ನು ಜನರೇ ತಿಳಿಯಬಹುದು.

ಕೊರೋನಾ ಲಸಿಕೆ ಎಷ್ಟುಪರಿಣಾಮಕಾರಿ ಹಾಗೂ ಲಸಿಕೆ ಪಡೆದಿದ್ದಿದ್ದರೂ , ಎಷ್ಟುಮಂದಿ ಸಾವಿಗೀಡಾಗಿದ್ದಾರೆ, ಎಷ್ಟುಜನ​ರಿಗೆ ಸೋಂಕು ತಗು​ಲಿದೆ ಎಂಬುದು ಸೇರಿದಂತೆ ಇನ್ನಿತರ ವಿಚಾರಗಳು ವಾರಕ್ಕೊಮ್ಮೆ ಪರಿಷ್ಕರಣೆಯಾಗುವ ‘ಕೋವಿಡ್‌ ವ್ಯಾಕ್ಸಿನ್‌ ಟ್ರ್ಯಾಕರ್‌’ ಅನ್ನು ಶೀಘ್ರ ಬಿಡುಗಡೆ ಮಾಡಲಾಗುತ್ತದೆ ಎಂದು ಐಸಿ​ಎಂಆರ್‌ ಪ್ರಧಾನ ನಿರ್ದೇ​ಶಕ ಬಲರಾಂ ಭಾರ್ಗವ ಹೇಳಿ​ದ್ದಾ​ರೆ.

‘ಕೋವಿನ್‌(ಲಸಿಕೆಯ ಬುಕ್ಕಿಂಗ್‌ಗಾಗಿ ಇರುವ ವೆಬ್‌ಸೈಟ್‌), ಐಸಿಎಂಆರ್‌ನ ರಾಷ್ಟ್ರೀಯ ಕೋವಿಡ್‌ ಪರೀಕ್ಷಾ ದತ್ತಾಂಶ ಮತ್ತು ಕೋವಿಡ್‌-19 ಇಂಡಿಯಾ ಪೋರ್ಟಲ್‌ನಲ್ಲಿರುವ ಅಂಶಗಳನ್ನು ಕ್ರೋಡೀಕರಿಸಿ ಕೋವಿಡ್‌ ವ್ಯಾಕ್ಸಿನ್‌ ಟ್ರ್ಯಾಕರ್‌ ಕಾರ್ಯ ನಿರ್ವಹಿಸಲಿದೆ’ ಎಂದಿದ್ದಾರೆ

See also  ಅಕ್ಟೋಬರ್‌ ಅವಧಿಯಲ್ಲಿ ದೇಶಾದ್ಯಂತ ವಾಡಿಕೆಗಿಂತ ಶೇ. 41ರಷ್ಟು ಹೆಚ್ಚು ಮಳೆ : ಹವಾಮಾನ ಇಲಾಖೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು