News Kannada
Tuesday, September 27 2022

ದೇಶ

ಲಸಿಕೆ ಸೆಂಚುರಿ: “ಇದು ಎಲ್ಲರ ಪ್ರಯಾಸದ ಫಲ, ದೇಶ ಏನನ್ನೂ ಸಾಧಿಸಬಲ್ಲದೆಂಬುದರ ಉದಾಹರಣೆ” – ನರೇಂದ್ರ ಮೋದಿ - 1 min read

Photo Credit :

ಭಾರತವು 100 ಕೋಟಿ ಡೋಸ್ ಲಸಿಕೆ ವಿತರಿಸುವ ಮೂಲಕ ಗುರುವಾರ ಹೊಸ ಮೈಲಿಗಲ್ಲು ಸೃಷ್ಟಿಸಿದ ಹಿನ್ನೆಲೆಯಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ದೇಶವನ್ನುದ್ದೇಶಿಸಿ ಮಾತನಾಡಿದರು.

ಕೊರೋನಾ ವಿರುದ್ಧದ ಹೋರಾಟದಲ್ಲಿ ಭಾರತ ಯಶಸ್ವಿಯಾಗಿದ್ದು, ದೇಶಾದ್ಯಂತ 100 ಕೋಟಿ ಲಸಿಕೆಯನ್ನು ನೀಡಲಾಗಿದೆ. ಇದು ಕೇವಲ ಒಬ್ಬಿಬ್ಬರ ಸಾಧನೆಯಲ್ಲ ದೇಶದ ಪ್ರತಿಯೊಬ್ಬರ ಸಾಧನೆ. ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಎಂಬುದು ನಮ್ಮ ಘೋಷವಾಕ್ಯವಾಗಿತ್ತು, ಇದರೊಂದಿಗೆ ಲಸಿಕೆ ಪ್ರಕ್ರಿಯೆಯಲ್ಲಿ ‘ಸಬ್ ಕಾ ಪ್ರಯಾಸ್’ (ಎಲ್ಲರ ಪ್ರಯತ್ನ) ಸೇರಿಕೊಂಡಿದೆ ಎಂದು ಎಲ್ಲರನ್ನೂ ಅಭಿನಂದಿಸಿದರು ಪ್ರಧಾನಿ ಮೋದಿ.

ಕೊರೋನಾ ಮೊದಲ ಅಲೆ ಕಂಡುಬಂದ ಸಂದರ್ಭದಲ್ಲಿ ದೇಶದ ಪರಿಸ್ಥಿತಿ ಅತ್ಯಂತ ಕಠಿಣವಾಗಿತ್ತು. ಸೋಂಕನ್ನು ಎದುರಿಸುವುದು ಹೇಗೆ, ಏನು ಮಾಡುವುದು ಎಂದು ಗೊತ್ತಿರಲಿಲ್ಲ. ಸಮಯ ಕಳೆದಂತೆ ಪರಿಸ್ಥಿತಿಗೆ ಹೊಂದಿಕೊಂಡೆವು. ಮಹಾಮಾರಿಯನ್ನು ನಾವೆಲ್ಲರು ಸಮರ್ಥವಾಗಿ ಎದುರಿಸುತ್ತಿದ್ದೇವೆ ಎಂದರು.
ಕಳೆದ ಜನವರಿಯಲ್ಲಿ ಕೊರೋನಾ ಲಸಿಕೆ ಬಂದ ಮೇಲೆ 9 ತಿಂಗಳಲ್ಲಿ ಸಾಧನೆ ಮಾಡಿದ್ದೇವೆ. ಸವಾಲನ್ನು ಸಮರ್ಥವಾಗಿ ಎದುರಿಸಿದ್ದೇವೆ. ಅದರ ಪರಿಣಾಮವೇ ಇಂದು 100 ಕೋಟಿ ಲಸಿಕೆ. ಇದು ನಮ್ಮ ದೇಶದ ಸಾಮರ್ಥ್ಯದ ಪ್ರತಿಬಿಂಬ ಎಂದರು.

100 ಕೋಟಿ ಲಸಿಕೆಗಳು ಕೇವಲ ಸಂಖ್ಯೆಯಲ್ಲ, ದೇಶದ ಇತಿಹಾಸದಲ್ಲಿ ಇದೊಂದು ಹೊಸ ಅಧ್ಯಾಯದ ಆರಂಭವಾಗಿದೆ. ಭಾರತವು ಕಠಿಣ ಗುರಿಯನ್ನು ಯಶಸ್ವಿಯಾಗಿ ಸಾಧಿಸಬಹುದು ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ದೇಶವು ತನ್ನ ಗುರಿಗಳ ಈಡೇರಿಕೆಗೆ ಶ್ರಮಿಸುತ್ತಿದೆ ಎಂಬುದನ್ನು ಇದು ತೋರಿಸುತ್ತದೆ ಎಂದು ಶ್ಲಾಘಿಸಿದರು.

ಭಾರತದ ಸಂಪೂರ್ಣ ವ್ಯಾಕ್ಸಿನೇಷನ್ ಕಾರ್ಯಕ್ರಮವು ವಿಜ್ಞಾನ-ಚಾಲಿತ ಮತ್ತು ವಿಜ್ಞಾನ ಆಧಾರಿತವಾಗಿದೆ ಎಂಬ ಅಂಶದ ಬಗ್ಗೆ ನಾವು ಹೆಮ್ಮೆ ಪಡಬೇಕು. ಇದು ಸಂಪೂರ್ಣವಾಗಿ ವೈಜ್ಞಾನಿಕ ವಿಧಾನಗಳನ್ನು ಆಧರಿಸಿದೆ ಎಂದರು.

ನಮ್ಮ ಲಸಿಕೆ ಅಭಿಯಾನದಲ್ಲಿ ವಿಐಪಿ ಸಂಸ್ಕೃತಿ ಇಲ್ಲ. ಅದೆಷ್ಟೇ ದೊಡ್ಡ ಮನುಷ್ಯರಾಗಿರಲಿ, ಯಾವುದೇ ಹುದ್ದೆಯಲ್ಲಿರಲಿ ಅವರೆಲ್ಲರಿಗೂ ಜನಸಾಮಾನ್ಯರ ಸಾಲಿನಲ್ಲಿಯೇ ಲಸಿಕೆ ಸಿಕ್ಕಿದೆ ಎಂದು ಭಾರತದ ಲಸಿಕೆ ಪ್ರಕ್ರಿಯೆಯ ಆಯಾಮವನ್ನು ಮೋದಿ ಬಿಚ್ಚಿಟ್ಟರು.

ಭಾರತ ಮತ್ತು ವಿದೇಶಗಳಲ್ಲಿನ ತಜ್ಞರು ಭಾರತದ ಆರ್ಥಿಕತೆಯ ಬಗ್ಗೆ ತುಂಬಾ ಧನಾತ್ಮಕ ಅಭಿಪ್ರಾಯ ಹೊಂದಿದ್ದಾರೆ. ಇಂದು, ಭಾರತೀಯ ಕಂಪನಿಗಳಿಗೆ ದಾಖಲೆಯ ಹೂಡಿಕೆ ಮಾತ್ರ ಬರುತ್ತಿಲ್ಲ. ಬದಲಾಗಿ ಯುವಕರಿಗೆ ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿವೆ. ಇಂದು ಎಲ್ಲರೂ ‘ಮೇಡ್ ಇನ್ ಇಂಡಿಯಾ’ ಬಗ್ಗೆ ಮಾತನಾಡುತ್ತಿದ್ದಾರೆ ಎಂದರು.

ಇದೇ ವೇಳೆ, ಬರಲಿರುವ ದೀಪಾವಳಿಯನ್ನು ಎಚ್ಚರಿಕೆಯಿಂದಲೇ ಆಚರಿಸಬೇಕು ಎಂದಿರುವ ಪ್ರಧಾನಿ, ಲಸಿಕೆ ಪಡೆದಿರುವವರು ಇನ್ನೂ ಲಸಿಕೆ ಪಡೆಯದೇ ಇರುವವರನ್ನು ಪ್ರೋತ್ಸಾಹಿಸಬೇಕು ಎಂದಿದ್ದಾರೆ.

See also  ಪಂಜಾಬಿನಲ್ಲಿ ದಲಿತರತ್ತ ಗಮನ ಹರಿಸಿದ- ಕಾಂಗ್ರೆಸ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

44
News Kannada

The most exciting, trusted and preferred news websites of Karnataka and Kannadigas around the world.

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು