News Kannada
Sunday, December 04 2022

ದೇಶ

ಕೇರಳ,ಆಂಧ್ರಪ್ರದೇಶ ಹಾಗೂ ಚಂಡೀಗಢದಲ್ಲಿ ಮೊದಲ ಒಮೈಕ್ರಾನ್ ಪ್ರಕರಣ ವರದಿ

Photo Credit :

ಹೊಸದಿಲ್ಲಿ: ದೇಶದಲ್ಲಿ ರವಿವಾರ ಒಟ್ಟು ಐದು ಹೊಸ ಒಮೈಕ್ರಾನ್ ಪ್ರಕರಣಗಳು ವರದಿಯಾಗಿದ್ದು, ಹೊಸ ಕೊರೋನವೈರಸ್ ರೂಪಾಂತರದ ಸಂಖ್ಯೆ 38 ಕ್ಕೆ ಏರಿಕೆಯಾಗಿದೆ.

ಕೇರಳ,ಆಂಧ್ರಪ್ರದೇಶ ಹಾಗೂ ಚಂಡೀಗಢದಲ್ಲಿ ಇಂದು ಮೊದಲ ಒಮೈಕ್ರಾನ್ ಪ್ರಕರಣ ವರದಿಯಾದರೆ ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ತಲಾ ಒಂದು ಪ್ರಕರಣ ವರದಿಯಾಗಿದೆ.

ಈ ಎರಡು ರಾಜ್ಯಗಳಲ್ಲಿ ಹೊಸ ರೂಪಾಂತರವು ಕ್ರಮವಾಗಿ ಮೂರು ಹಾಗೂ 18 ಕ್ಕೆ ಏರಿಕೆಯಾಗಿದೆ.

ಕೇರಳವು ತನ್ನ ಮೊದಲ ಕೋವಿಡ್ -19 ರೂಪಾಂತರದ ಒಮೈಕ್ರಾನ್ ಪ್ರಕರಣವನ್ನು ಇಂದು ವರದಿ ಮಾಡಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.

ತನ್ನ ಫೇಸ್‌ಬುಕ್ ಪುಟದಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ, ರೋಗಿಯು ಇತ್ತೀಚೆಗೆ ಇಂಗ್ಲೆಂಡ್ ನಿಂದ ಬಂದ ಕೇರಳ ಮೂಲದವರಾಗಿದ್ದಾರೆ ಎಂದು ಸಚಿವರು ಹೇಳಿದ್ದಾರೆ.

ರೋಗಿಯ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಹಾಗೂ ವೈರಸ್‌ನ ಹೊಸ ರೂಪಾಂತರದ ಹರಡುವಿಕೆಯನ್ನು ತಡೆಯಲು ಸರಕಾರ ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿರುವುದರಿಂದ ಭಯಪಡುವ ಅಗತ್ಯವಿಲ್ಲ ಎಂದು ಅವರು ಹೇಳಿದರು.

See also  ಕೇರಳದ ಹಲವು ಭಾಗಗಳಲ್ಲಿ ಗುರುವಾರ ಗುಡುಗು, ಮಿಂಚು ಸಹಿತ ಭಾರಿ ಮಳೆ : 8 ಜಿಲ್ಲೆಗಳಲ್ಲಿ 'ಆರೆಂಜ್‌ ಅಲರ್ಟ್‌'
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

12792
NewsKannada

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು