News Kannada
Wednesday, October 05 2022

ಅರುಣಾಚಲಪ್ರದೇಶ

ಇಂದು ಮುಂಜಾನೆ ಅರುಣಾಚಲ ಪ್ರದೇಶದಲ್ಲಿ ಭೂಕಂಪ: 5.3ರಷ್ಟು ತೀವ್ರತೆ ದಾಖಲು - 1 min read

Photo Credit :

ಅರುಣಾಚಲ ಪ್ರದೇಶ: ಅರುಣಾಚಲ ಪ್ರದೇಶದಲ್ಲಿ ಇಂದು ಮುಂಜಾನೆ ಭೂಮಿ ನಡುಗಿದ್ದು, ರಿಕ್ಟರ್ ಮಾಪಕದಲ್ಲಿ 5.3ರಷ್ಟು ತೀವ್ರತೆ ದಾಖಲಾಗಿದೆ.ಪ್ಯಾಂಗಿನ್​​ನಿಂದ 1176 ಕಿಮೀ ದೂರದಲ್ಲಿ ಭೂಮೇಲ್ಮೈಗಿಂತ 30 ಕಿಮೀ ಆಳದಲ್ಲಿ ಭೂಕಂಪನವಾಗಿದ್ದಾಗಿ ಹೇಳಿದೆ.

ಚೀನಾದ ಕಿಂಗ್ಹೈನಲ್ಲಿ ಭೂಕಂಪನ ಉಂಟಾಗಿದ್ದು, ಅದರ ಪರಿಣಾಮ ಅರುಣಾಚಲ ಪ್ರದೇಶದಲ್ಲೂ ಭೂಮಿ ಕಂಪಿಸಿದೆ ಎಂದು ರಾಷ್ಟ್ರೀಯ ಭೂಕಂಪನಶಾಸ್ತ್ರ ಕೇಂದ್ರ ತಿಳಿಸಿದೆ.

ಯಾರೂ ಮೃತಪಟ್ಟ ಮತ್ತು ಯಾವುದೇ ಆಸ್ತಿ-ಪಾಸ್ತಿ ಹಾನಿಯಾದ ಬಗ್ಗೆ ವರದಿಯಾಗಿಲ್ಲ ಎಂದೂ ಹೇಳಲಾಗಿದೆ.

ಕೆಲವು ದಿನಗಳ ಹಿಂದೆ ಅರುಣಾಚಲ ಪ್ರದೇಶದಲ್ಲಿ ಎರಡು ಭೂಕಂಪನಗಳು ಉಂಟಾಗಿದ್ದವು. ಫೆಬ್ರವರಿಯಲ್ಲಿ ಪ್ಯಾಂಗಿನ್​​ನಲ್ಲಿ ಸುಮಾರು 4.3 ರಷ್ಟು ತೀವ್ರತೆಯಲ್ಲಿ, ಭೂಮೇಲ್ಮೈನಿಂದ 10 ಕಿಮೀ ಆಳದಲ್ಲಿ ಭೂಕಂಪನವಾಗಿತ್ತು. ಹಾಗೇ ಜನವರಿಯಲ್ಲಿ ದಿಬಾಂಗ್​​ ವ್ಯಾಲಿ ಜಿಲ್ಲೆಯಲ್ಲಿ ಭೂಮಿ ನಡುಗಿತ್ತು. ಅದರ ತೀವ್ರತೆ ರಿಕ್ಟರ್ ಮಾಪಕದಲ್ಲಿ 4.2ರಷ್ಟು ದಾಖಲಾಗಿತ್ತು. ಒಟ್ಟಾರೆ ಈ ಪ್ಯಾಂಗಿನ್ ಸುತ್ತಮುತ್ತ ಪದೇಪದೆ ಭೂಕಂಪನವಾಗುತ್ತಿದೆ.

See also  ವಿಪಿ ವೆಂಕಯ್ಯ ನಾಯ್ಡು ಅವರ ಅರುಣಾಚಲ ಪ್ರದೇಶ ಭೇಟಿಗೆ ಚೀನಾ ಆಕ್ಷೇಪ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

12795
NewsKannada

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು