ಟಾಟಾ ಟ್ರಸ್ಟ್‌ನ ಅಧ್ಯಕ್ಷರು, ಉದ್ಯಮಿ ರತನ್ ಟಾಟಾ ಅವರಿಗೆ ಅಸ್ಸಾಂ ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಅಸ್ಸಾಂನ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಅತ್ಯುನ್ನತ ಪ್ರಶಸ್ತಿಯಾದ ‘ಅಸ್ಸಾಂ ಭೈಭವ್’ ನೀಡಿ ಗೌರವಿಸಿದ್ದಾರೆ.
ಮುಂಬೈನ ಕೊಲಾಬಾದಲ್ಲಿ ಕಾರ್ಯಕ್ರಮ ನಡೆದಿದ್ದು, ಅಸ್ಸಾಂನಲ್ಲಿ ಕ್ಯಾನ್ಸರ್ ಚಿಕಿತ್ಸೆಗಾಗಿ ರತನ್ ಟಾಟಾ ನೀಡಿರುವ ಅಮೋಘ ಕೊಡುಗೆಗಳನ್ನು ಪರಿಗಣಿಸಿ ಅವರಿಗೆ ಈ ಪ್ರಶಸ್ತಿ ನೀಡಲಾಗಿದೆ.
ಪ್ರಶಸ್ತಿ ಫಲಕ, ಐದು ಲಕ್ಷ ರೂಪಾಯಿ ನಗದು ಮೊತ್ತ ಹಾಗೂ ಪದಕ ನೀಡಿ ಗೌರವಿಸಲಾಗಿದೆ. ಉದ್ಯಮಿಯಾಗಿ, ದಾನಿಯಾಗಿ ರತನ್ ಟಾಟಾ ಅವರು ಅಸ್ಸಾಂನಲ್ಲಿ ಕ್ಯಾನ್ಸರ್ ಚಿಕಿತ್ಸೆಗಾಗಿ ಅಮೋಘ ಕೊಡುಗೆಗಳನ್ನು ನೀಡಿದ್ದಾರೆ ಎಂದು ಶರ್ಮಾ ಹೇಳಿದ್ದಾರೆ.
Had the privilege to honour @tatatrusts Chairman Shri Ratan Naval Tata with ‘Assam Baibhav’, our State’s highest civilian award,at Mumbai today.
The visionary industrialist & philanthropist has made exceptional contribution towards furthering cancer care in Assam.@RNTata2000 pic.twitter.com/dwDlXyEtvq
— Himanta Biswa Sarma (@himantabiswa) February 16, 2022