News Kannada
Thursday, August 11 2022

ಅಸ್ಸಾಂ

ಅಸ್ಸಾಂ: ಬಾಂಗ್ಲಾದೇಶ ಮೂಲದ 12 ಜಿಹಾದಿಗಳ ಬಂಧನ - 1 min read

Assam: 12 Bangladeshi-origin jihadists arrested

 ಅಸ್ಸಾಂ: ಬಾಂಗ್ಲಾದೇಶ ಮೂಲದ 12 ಜಿಹಾದಿಗಳನ್ನು ಅಸ್ಸಾಂನ ಎರಡು ಜಿಲ್ಲೆಗಳಲ್ಲಿ ಬಂಧಿಸಲಾಗಿದೆ. ಇವರು ಭಯೋತ್ಪಾದಕ ಗುಂಪು ಅನ್ಸಾರುಲ್ ಇಸ್ಲಾಂನೊಂದಿಗೆ ಸಂಪರ್ಕ ಹೊಂದಿದ್ದರು ಎಂದು ಪೋಲೀಸರು ಹೇಳಿರುವುದಾಗಿ ಮೂಲಗಳು ವರದಿ ಮಾಡಿವೆ. ಮೋರಿಗಾಂವ್ ಜಿಲ್ಲೆಯಲ್ಲಿಯೂ ಇದೇ ರೀತಿ ಲಿಂಕ್‌ಮೆನ್ ಎಂದು ಶಂಕಿಸಲಾದ ಇತರ ಏಳು ಮಂದಿಯನ್ನು ಸಹ ಬಂಧಿಸಲಾಗಿದೆ.

ಕೇಂದ್ರ ಹಾಗೂ ರಾಜ್ಯ ಇಲಾಖೆಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಎರಡು ಪ್ರಮುಖ ಭಯೋತ್ಪಾದಕ ಘಟಕಗಳನ್ನು ರಾಜ್ಯದಲ್ಲಿ ಭೇದಿಸಲಾಗಿದೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.
12 ಶಂಕಿತ ಜಿಹಾದಿಗಳಲ್ಲಿ 10 ಮಂದಿಯನ್ನು ಬಾರ್ಪೇಟಾ ಜಿಲ್ಲೆಯ ಜಾನಿಯಾ ಪ್ರದೇಶದ ವಿವಿಧ ಪಾಕೆಟ್‌ಗಳಲ್ಲಿ ಬಂಧಿಸಲಾಗಿದ್ದು, ಒಬ್ಬರನ್ನು ಗುವಾಹಟಿಯಿಂದ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಅಮಿತಾಭ್ ಸಿನ್ಹಾ ತಿಳಿಸಿದ್ದಾರೆ.

ಅಲ್ಲದೇ ಇನ್ನೊಬ್ಬನನ್ನು ಮೋರಿಬಾರಿ ಪೊಲೀಸ್ ಠಾಣೆ ವ್ಯಾಪ್ತಿಯ ಸೊರುಚೋಳ ಗ್ರಾಮದಲ್ಲಿ ವಶಕ್ಕೆ ಪಡೆಯಲಾಗಿದ್ದು ಈತ ಖಾಸಗಿ ಮದರಸಾ ನಡೆಸುತ್ತಿದ್ದ ಎನ್ನಲಾಗಿದೆ. ಬಂಧಿತನ ಮೇಲೆ ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯ್ದೆ (ಯುಎಪಿಎ) ಆರೋಪ ಹೊರಿಸಲಾಗಿದೆ ಎಂದು ಮೂಲಗಳ ವರದಿ ಹೇಳಿದೆ. ಬಂಧಿತ ವ್ಯಕ್ತಿಯನ್ನು ಮುಫ್ತಿ ಮುಸ್ತಫಾ ಎಂದು ಗುರುತಿಸಲಾಗಿದ್ದು ಈತ ಭಾರತದಲ್ಲಿ ದೊಡ್ಡ ಸಂಘಟನೆಯಾದ ಅಲ್-ಖೈದಾದೊಂದಿಗೆ ಸಂಯೋಜಿತವಾಗಿರುವ ಅನ್ಸಾರುಲ್ ಇಸ್ಲಾಮ್‌ಗೆ ಸಂಬಂಧಿಸಿದ ವಿವಿಧ ಹಣಕಾಸು ವಹಿವಾಟುಗಳು ಮತ್ತು ದೇಶ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ.

See also  ಬೆಳ್ತಂಗಡಿ : ಗ್ರಾಹಕರಿಗೆ ಪ್ಲಾಸ್ಟಿಕ್ ನಿಷೇಧ ಬಗ್ಗೆ ಮಾಹಿತಿ ನೀಡಿ ಎಂದ ವ್ಯಾಪಾರಿಗಳು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

30409
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು