News Kannada
Friday, September 29 2023
ಬಿಹಾರ

ಬಿಹಾರದಲ್ಲಿ ಸಿಡಿಲಿಗೆ 17ಮಂದಿ ಬಲಿ: ಮೃತರ ಕುಟುಂಬಸ್ಥರಿಗೆ ತಲಾ 4ಲಕ್ಷ ಪರಿಹಾರ ಘೋಷಣೆ

Kerala: Heavy rains lash various parts of the state, red alert issued for 8 districts
Photo Credit : Wikimedia

ಬಿಹಾರ:  ಭಾನುವಾರ ಉಂಟಾದ ಸಿಡಿಲಿನಬ್ಬರಕ್ಕೆ ರಾಜ್ಯದಾದ್ಯಂತ 17 ಜನರು ಸಾವನ್ನಪ್ಪಿದ್ದಾರೆ. ಜನರ ಸಾವಿಗೆ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಸಂತಾಪ ಸೂಚಿಸಿದ್ದು, ಮೃತರ ಕುಟುಂಬಸ್ಥರಿಗೆ ತಲಾ 4 ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಸಿಎಂ ಭಾಗಲ್‌ಪುರ-3, ವೈಶಾಲಿ-3, ಖಗಾರಿಯಾ- 2, ಕತಿಹಾರ್‌- 1, ಸಹರ್ಸಾದಲ್ಲಿ- 1, ಮಾಧೇಪುರ- 1, ಬಂಕಾ- 2 ಮತ್ತು ಮುಂಗೇರ್‌ನಲ್ಲಿ ಒಬ್ಬರು ಸಿಡಿಲಿನ ಹೊಡೆತಕ್ಕೆ ಸಾವನ್ನಪ್ಪಿದ್ದಾರೆ.

ಸಂತ್ರಸ್ತ ಕುಟುಂಬಗಳಿಗೆ ದೇವರು ದುಖಃ ಭರಿಸುವ ಶಕ್ತಿ ನೀಡಲಿ. ಮೃತರ ಕುಟುಂಬಕ್ಕೆ 4 ಲಕ್ಷ ರೂ.ಗಳನ್ನು ತಕ್ಷಣವೇ ನೀಡಲಾಗುವುದು ಎಂದು ಟ್ವಿಟ್ಟರ್‌ನಲ್ಲಿ ತಿಳಿಸಿದ್ದಾರೆ. ಪ್ರತಿಕೂಲ ವಾತಾವರಣದಲ್ಲಿ ಸಂಪೂರ್ಣ ಜಾಗರೂಕತೆ ವಹಿಸಲು ಮತ್ತು ಗುಡುಗು ಸಹಿತ ಮಳೆಯ ಕಾರಣದಿಂದ ವಿಪತ್ತು ನಿರ್ವಹಣಾ ಇಲಾಖೆ ನೀಡಿರುವ ಸಲಹೆಗಳನ್ನು ಪಾಲಿಸುವಂತೆ ಮನವಿ ಮಾಡಿದರು.

See also  ಪಾಟ್ನಾ: ವಿಚ್ಛೇದಿತ ಪತ್ನಿ, ಪುತ್ರಿಗೆ ಗುಂಡಿಕ್ಕಿ ವ್ಯಕ್ತಿ ತಾನೂ ಆತ್ಮಹತ್ಯೆಗೆ ಶರಣು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು