News Kannada
Friday, March 31 2023

ದೆಹಲಿ

ವಾಹನಗಳ ತಯಾರಕರು ಭಾರತೀಯ ಸಂಗೀತ ವಾದ್ಯಗಳ ಶಬ್ದವನ್ನು ಅಳವಡಿಸಬೇಕು : ನಿತಿನ್ ಗಡ್ಕರಿ

Photo Credit :

ದೆಹಲಿ : ವಾಹನಗಳ ಕರ್ಕಶ ಹಾರ್ನ್​​ನಿಂದ ಆಗುವ ಶಬ್ದಮಾಲಿನ್ಯದ ವಿರುದ್ಧ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್​ ಗಡ್ಕರಿ ಪರಿಹಾರ ಸೂಚಿಸುವ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ವಾಹನಗಳ ತಯಾರಕರು ಹಾರ್ನ್​ಗಳನ್ನು ಇಡುವಾಗಲೇ ಅದರಲ್ಲಿ ಭಾರತೀಯ ಸಂಗೀತ ವಾದ್ಯಗಳ ಶಬ್ದವನ್ನು ಅಳವಡಿಸಬೇಕು ಎಂದು ಸೂಚನೆ ನೀಡುವ ಸಂಬಂಧ ಹೊಸ ಕಾಯ್ದೆ ಜಾರಿಗೊಳಿಸಲು ಕೇಂದ್ರ ಸಾರಿಗೆ ಇಲಾಖೆ ಮುಂದಾಗಿದೆ.

ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ನಿತಿನ್​ ಗಡ್ಕರಿ ತಿಳಿಸಿದ್ದಾರೆ. ನಾನು ನಾಗ್ಪುರದ ಕಟ್ಟಡವೊಂದರ 11ನೇ ಫ್ಲೋರ್​​ನಲ್ಲಿ ವಾಸವಾಗಿದ್ದೇನೆ. ಪ್ರತಿ ಮುಂಜಾನೆ ಒಂದು ಗಂಟೆ ಪ್ರಾಣಾಯಾಮ ಮಾಡುತ್ತೇನೆ. ಆದರೆ ಅಂಥ ಮುಂಜಾನೆಯ ಮೌನದ ಹೊತ್ತಲ್ಲೂ ವಾಹನಗಳ ಕರ್ಕಶ ಹಾರ್ನ್​ಗಳು ನನ್ನನ್ನು ಡಿಸ್ಟರ್ಬ್​ ಮಾಡುತ್ತವೆ.

ಈ ಗಲಾಟೆಯನ್ನು ಪ್ರತಿದಿನ ಕೇಳಿ ಸಾಕಾಗಿದೆ. ಹಾಗೇ ನನ್ನಲ್ಲಿ ಒಂದು ಯೋಚನೆಯೂ ಬಂದಿದೆ.ವಾಹನಗಳ ಹಾರ್ನ್​ಗಳು ಸರಿಯಾಗಿ, ಇಂಪಾಗಿ ಇರಬೇಕು. ಅದರಂತೆ ಭಾರತೀಯ ಸಂಗೀತ ವಾದ್ಯಗಳ ಧ್ವನಿಯನ್ನು ವಾಹನಗಳ ಹಾರ್ನ್​​ನಲ್ಲಿ ಅಳವಡಿಸಬೇಕು ಎಂದೆನಿಸಿದೆ. ಎಲ್ಲವೂ ಸರಿ ಎನ್ನಿಸಿದರೆ ಮುಂದೆ ವಾಹನಗಳು ಹಾರ್ನ್​ ಹಾಕಿದಾಗ, ಅದರಿಂದ ತಬಲಾ, ಕೊಳಲು, ಪಿಟೀಲಿನ ಇಂಪು ನಾದ ಕೇಳಿಬರಲಿದೆ ಎಂದು ನಿತಿನ್​ ಗಡ್ಕರಿ ಹೇಳಿದ್ದಾರೆ.

See also  ಚಾರ್ಮಾಡೀ ಘಾಟ್‌ ನಲ್ಲಿ ಭಾರೀ ವಾಹನ ಸಂಚಾರಕ್ಕೆ ನಿಷೇಧ ಹೇರಿದ ಜಿಲ್ಲಾಡಳಿತ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು