ಮಾಜಿ ಕ್ರಿಕೆಟಿಗ, ಬಿಜೆಪಿ ಸಂಸದ ಗೌತಮ್ ಗಂಭೀರ್‌ಗೆ ಅವರಿಗೆ ಭಾನುವಾರ ಮತ್ತೆ ಜೀವ ಬೆದರಿಕೆ ನೀಡುವ ಇ-ಮೇಲ್ ಸಂದೇಶ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
“[email protected]” ಮಧ್ಯ ರಾತ್ರಿ 1.37 ರ ಸುಮಾರಿಗೆ ಇಮೇಲ್ ಬಂದಿರುವುದಾಗಿ ವರದಿಯಾಗಿದೆ.
ಇ-ಮೇಲೆ ನಲ್ಲಿ “ನಿಮ್ಮ ದೆಹಲಿ ಪೊಲೀಸರು ಮತ್ತು ಐಪಿಎಸ್ ಶ್ವೇತಾ ಅವರು ಏನ್ನೂ ಮಾಡಲು ಸಾಧ್ಯವಿಲ್ಲ. ನಮ್ಮ ಗೂಢಚಾರರು ಸಹ ಪೊಲೀಸರಲ್ಲಿ ಇದ್ದಾರೆ. ನಿಮ್ಮ ಬಗ್ಗೆ ಎಲ್ಲಾ ಮಾಹಿತಿಗಳು ಬರುತ್ತಿವೆ” ಎಂದು ಸಂದೇಶ ಕಳುಹಿಸಲಾಗಿದೆ.
ಇದಕ್ಕೂ ಮೊದಲು (ನ.24) ಐಸಿಸ್ ಕಾಶ್ಮೀರದಿಂದ ಎರಡು ಕೊಲೆ ಬೆದರಿಕೆ ಇ-ಮೇಲ್ ಸಂದೇಶ ಬಂದಿತ್ತು.
“ತಮಗೆ ಎರಡನೇ ಬಾರಿ ಜೀವ ಬೆದರಿಕೆ ಕರೆ ಬಂದಿದ್ದು, ಸೂಕ್ತ ಭದ್ರತೆ ಒದಗಿಸಿ,” ಎಂದು ಗೌತಮ್ ಗಂಭೀರ್ ಪೊಲೀಸರಿಗೆ ಮನವಿ ಮಾಡಿದ್ದಾರೆ. ಇದಾದ ಬಳಿಕ ದೆಹಲಿ ಸಂಸದ ಗಂಭೀರ್ ಮನೆಗೆ ಬಿಗಿ ಭದ್ರತೆಯನ್ನು ಒದಗಿಸಲಾಗಿತ್ತು.
2018ರಲ್ಲೂ ಗಂಭೀರ್ ಅವರಿಗೆ ಜೀವ ಬೆದರಿಕೆ ಕರೆಗಳು ಬಂದಿತ್ತು. ಅಂತಾರಾಷ್ಟ್ರೀಯ ದೂರವಾಣಿ ಸಂಖ್ಯೆಯೊಂದರಿಂದ ಜೀವ ಬೆದರಿಕೆ ಕರೆ ಮಾಡಲಾಗಿತ್ತು.