News Kannada
Monday, September 26 2022

ದೆಹಲಿ

ವರ್ಷಾಂತ್ಯಕ್ಕೆ ಪೂರ್ಣ ಪ್ರಮಾಣದ ಲಸಿಕೆ ಪೂರೈಕೆಯಾಗಿಲ್ಲ; ರಾಹುಲ್‌ ಗಾಂಧಿ - 1 min read

Photo Credit :

ನವದೆಹಲಿ : ವರ್ಷಾಂತ್ಯಕ್ಕೆ ರಾಷ್ಟ್ರದ ಅರ್ಹ ಎಲ್ಲರಿಗೂ ಪೂರ್ಣ ಪ್ರಮಾಣದ ಲಸಿಕೆ ಪೂರೈಸುವ ಬಗ್ಗೆ ಕೇಂದ್ರ ಸರ್ಕಾರ ನೀಡಿದ್ದ ಭರವಸೆಯನ್ನು ಈಡೇರಿಸಿಲ್ಲ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಕಿಡಿಕಾರಿದ್ದಾರೆ.

2021ರ ಅಂತ್ಯಕ್ಕೆ ಕೋವಿಡ್‌-19 ಸೋಂಕಿನ ವಿರುದ್ಧ ಅರ್ಹ ಎಲ್ಲರಿಗೂ ಎರಡು ಡೋಸ್‌ ಲಸಿಕೆಯನ್ನು ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಜೂನ್‌ ತಿಂಗಳಲ್ಲಿ ಸುಪ್ರೀಂ ಕೋರ್ಟ್‌ಗೆ ತಿಳಿಸಿತ್ತು.

2021ರ ಅಂತ್ಯಕ್ಕೆ ಅರ್ಹ ಎಲ್ಲರಿಗೂ ಎರಡು ಡೋಸ್‌ ಲಸಿಕೆ ನೀಡುವುದಾಗಿ ಕೇಂದ್ರ ಸರ್ಕಾರ ಭರವಸೆ ನೀಡಿತ್ತು. ಇಂದು ವರ್ಷದ ಕೊನೆಯ ದಿನ. ರಾಷ್ಟ್ರದಲ್ಲಿ ಇನ್ನೂ ಲಸಿಕೆಯ ಅಭಾವ ಎದುರಿಸುತ್ತಿದೆ. ಇದು ಮತ್ತೊಂದು ಭಾಷಣಕಲೆಯ ವೈಫಲ್ಯ’ ಎಂದು ರಾಹುಲ್‌ ಗಾಂಧಿ ಟ್ವೀಟ್‌ ಮಾಡಿದ್ದಾರೆ.

ರಾಷ್ಟ್ರದಾದ್ಯಂತ ಶುಕ್ರವಾರ ಮಧ್ಯಾಹ್ನದ ವೇಳೆಗೆ ಸುಮಾರು 114.67 ಕೋಟಿ ಡೋಸ್‌ ಲಸಿಕೆ ನೀಡಲಾಗಿದೆ. 84.51 ಕೋಟಿಗೂ ಹೆಚ್ಚು ಮಂದಿ ಮೊದಲ ಡೋಸ್‌ ಪಡೆದಿದ್ದಾರೆ. 60.15 ಕೋಟಿಗೂ ಹೆಚ್ಚು ಮಂದಿಗೆ ಎರಡನೇ ಡೋಸ್‌ ಸಿಕ್ಕಿದೆ. 18 ವರ್ಷಕ್ಕಿಂತ ಮೇಲ್ಪಟ್ಟ, ಅರ್ಹ ಮಂದಿ 94 ಕೋಟಿಗೂ ಹೆಚ್ಚಿದ್ದಾರೆ.

See also  ಇನ್ಸ್ಟಾಗ್ರಾಮ್ ಗೆ 'ಪ್ರೈವೇಟ್ ಸ್ಟೋರಿ ಲೈಕ್ಸ್' ಹೊಸ ವೈಶಿಷ್ಟ್ಯ ಎಂಟ್ರಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

12790
NewsKannada

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು