ನವದೆಹಲಿ : ಯುವಕನೊಬ್ಬನಿಗೆ ಚೂರಿಯಿಂದ ಇರಿದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಸಿದಂತೆ ದೆಹಲಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಅನುಷ್(19) ಮತ್ತು ಬಂಟಿ(18) ಬಂಧಿತರು.
ರಣ್‍ಬೀರ್‍ನಗರದಲ್ಲಿರುವ ತನ್ನ ಸ್ನೇಹಿತ ಗೌರವ್‍ನನ್ನು ಭೇಟಿ ಮಾಡಲು ಬೈಕ್‍ನಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಸಂದೀಪ್ ಸೂರಿ ಕೆಲವು ಸ್ಥಳೀಯ ಯುವಕರೊಂದಿಗೆ ಜಗಳವಾಡಿಕೊಂಡಿದ್ದನು.
ವಿಷ್ಣುಗಾರ್ಡನ್ ನಿವಾಸಿಯಾದ ಸಂದೀಪ್ ಸೂರಿ ಎಂಬ ಯುವಕನೊಂದಿಗೆ ಈ ಇಬ್ಬರು ಆರೋಪಿಗಳು ದ್ವೇಷ ಬೆಳೆಸಿಕೊಂಡಿದ್ದರು.ಈ ಜಗಳ ದ್ವೇಷಕ್ಕೆ ತಿರುಗಿದ್ದು, ನಂತರ ಈ ಯುವಕರ ಗುಂಪು ಆತನಿಗೆ ಚಾಕುವಿನಿಂದ ಇರಿದು ಗಾಯಗೊಳಿಸಿ ಪರಾರಿಯಾಗಿತ್ತು.
ಆರೋಪಿಗಳ ಪೈಕಿ ಇಬ್ಬರನ್ನು ಪೊಲೀಸರು ಬಂಧಿಸಿದ್ದು, ಉಳಿದ ಆರೋಪಿಗಳಿಗಾಗಿ ಶೋಧ ಕಾರ್ಯ ಕೈಗೊಂಡಿದ್ದಾರೆ.