News Kannada
Sunday, February 05 2023

ದೆಹಲಿ

ಕಳೆದ 12 ದಿನಗಳಿಂದ ನಾಪತ್ತೆಯಾಗಿದ್ದ ಗಾಯಕಿ ಶವವಾಗಿ ಪತ್ತೆ

Photo Credit :

ನವದೆಹಲಿ: ಕಳೆದ 12 ದಿನಗಳಿಂದ ನಾಪತ್ತೆಯಾಗಿದ್ದ 26 ವರ್ಷದ ಹರಿಯಾಣ್ವಿ ಗಾಯಕಿ ಸೋಮವಾರ ಹರಿಯಾಣದ ರೋಹ್ಟಕ್ ಜಿಲ್ಲೆಯ ಹೆದ್ದಾರಿಯೊಂದರ ಬಳಿ ಶವವಾಗಿ ಪತ್ತೆಯಾಗಿದ್ದಾರೆ. ಗಾಯಕಿಯನ್ನು ಅಪಹರಿಸಿ ಕೊಂದ ಆರೋಪದ ಮೇಲೆ ದೆಹಲಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಮೃತ ಗಾಯಕಿಯನ್ನು ಸಂಗೀತ ಎಂದು ಗುರುತಿಸಲಾಗಿದ್ದು, ಇವರು ದೆಹಲಿಯಲ್ಲಿ ವಾಸವಾಗಿದ್ದರು. ಈಕೆ ಗಾಯಕಿಯಾಗಿದ್ದು, ಯೂಟ್ಯೂಬ್‌ನಲ್ಲಿ ತನ್ನ ಗಾಯನದ ವೀಡಿಯೊಗಳನ್ನು ಅಪ್‌ಲೋಡ್ ಮಾಡುತ್ತಿದ್ದಳು. ಕಳೆದ ಮೇ 11 ರಂದು ಯಾವುದೋ ಕೆಲಸದ ನಿಮಿತ್ತ ಹೊರಗೆ ಹೋಗಿದ್ದ ಯುವತಿ ಆಗಿನಿಂದ ಕಾಣೆಯಾಗಿದ್ದಳು ಎಂದು ಕುಟುಂಬಸ್ಥರ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದರು.

ಪ್ರಕರಣ ಸಂಬಂಧ ಪೊಲೀಸರು, ಸಂತ್ರಸ್ತೆಯ ಪರಿಚಿತರಾದ ಆರೋಪಿಗಳಾದ ರವಿ ಮತ್ತು ಅನಿಲ್ ಎಂಬುವವರನ್ನು ಬಂಧಿಸಿ, ಇವರ ವಿರುದ್ಧ ಅಪಹರಣ, ಕೊಲೆ ಮತ್ತು ಸಾಕ್ಷ್ಯವನ್ನು ಮರೆಮಾಚಲು ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕುರಿತಂತೆ ಪೊಲೀಸ್ ಉಪ ಕಮಿಷನರ್ (ದ್ವಾರಕಾ) ಶಂಕರ್ ಚೌಧರಿ ಮಾಹಿತಿ ನೀಡಿದ್ದು, ಗಾಯಕಿಯ ಕುಟುಂಬದ ದೂರಿನ ಮೇರೆಗೆ ನಾವು ಅಪಹರಣ ಪ್ರಕರಣವನ್ನು ದಾಖಲಿಸಿದ್ದೇವೆ. ನಮ್ಮ ತಂಡಗಳು ಹಲವು ದಾಳಿಗಳನ್ನು ನಡೆಸಿ ಇಬ್ಬರು ಆರೋಪಿಗಳನ್ನು ಹರಿಯಾಣದ ಮೆಹಮ್‌ನಿಂದ ಮೇ 21 ರಂದು ಬಂಧಿಸಿದ್ದೇವೆ. ವಿಚಾರಣೆಯ ಸಮಯದಲ್ಲಿ, ಅವರು ಮಹಿಳೆಯನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಆರೋಪಿಗಳಲ್ಲಿ ಒಬ್ಬರು ಆಕೆಗೆ ಕರೆ ಮಾಡಿ ಮ್ಯೂಸಿಕ್ ವಿಡಿಯೋ ಮಾಡುವ ನೆಪದಲ್ಲಿ ಭೇಟಿಯಾಗುವಂತೆ ಹೇಳಿದ್ದಾರೆ. ಆಕೆಗೆ ಮಾದಕ ವಸ್ತು ನೀಡಿ ಕೊಲೆಗೈದು ಆಕೆಯ ಶವವನ್ನು ರೋಹ್ಟಕ್ ಹೆದ್ದಾರಿ ಬಳಿ ಸಮಾಧಿ ಮಾಡಿದ್ದರು ಎಂದು ತಿಳಿಸಿದ್ದಾರೆ.

ಆರೋಪಿಗಳು ಗಾಯಕಿಯ ಸ್ನೇಹಿತರಾಗಿದ್ದು, ಈ ಹಿಂದೆ ರವಿ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ್ದಳು. ಇವರು ಮೆಹಮ್‌ನಲ್ಲಿ ವಾಸಿಸುತ್ತಿದ್ದು, ಹಣಕಾಸು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಡಿಸಿಪಿ ಹೇಳಿದರು.

ಸದ್ಯ ಸಂತ್ರಸ್ತೆಯ ಮೃತದೇಹವನ್ನು ಪತ್ತೆಯಾದ ಬಳಿಕ ಪೊಲೀಸರು ಮಹಿಳೆಯ ಕುಟುಂಬಕ್ಕೆ ಮಾಹಿತಿ ನೀಡಿ ಸೋಮವಾರ ಶವಪರೀಕ್ಷೆಗೆ ಕಳುಹಿಸಿದ್ದಾರೆ ಎನ್ನಲಾಗುತ್ತಿದೆ.

See also  ಐಸಿಸ್‌ಗೆ ಭಾರತದಿಂದ ಯುವಕರ ನೇಮಕಾತಿಯಲ್ಲಿ ಕೊಡಗಿನ ದೀಪ್ತಿ ಮಾರ್ಲಳೇ ಕಿಂಗ್‌ ಪಿನ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು