ನವದೆಹಲಿ: ವಾರಣಾಸಿಯ ಲಾಲ್ ಬಹದ್ದೂರ್ ಶಾಸ್ತ್ರಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಪ್ರಯಾಣಿಕನ ಬಳಿಯಿಂದ 1.21 ಕೋಟಿ ಮೌಲ್ಯದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.
ಪ್ರಯಾಣಿಕ ಶಾರ್ಜಾದಿಂದ ವಾರಣಾಸಿಗೆ ಬಂದಿದ್ದರು. ಆತನಿಂದ 1,21,30,560 ರೂಪಾಯಿ ಮೌಲ್ಯದ 2332.800 ಗ್ರಾಂ ಶುದ್ಧ ಚಿನ್ನವನ್ನು ವಾರಾಣಸಿ ತಂಡ ವಶಪಡಿಸಿಕೊಂಡಿದೆ. 20 ಚಿನ್ನ ಗಟ್ಟಿಗಳ ರೂಪದಲ್ಲಿದ್ದು, ಚಿನ್ನವನ್ನು ಕಪ್ಪು ಟೇಪ್ ನಲ್ಲಿ ಬಚ್ಚಿಟ್ಟು ಸೊಂಟದ ಕೆಳಗೆ ಸುತ್ತಲಾಗಿತ್ತು. ಪ್ರಯಾಣಿಕರ ವೈಯಕ್ತಿಕ ಶೋಧದ ವೇಳೆ ಈ ಚಿನ್ನದ ಗಟ್ಟಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅವರನ್ನು ವಾರಣಾಸಿಯ ಚೀಫ್ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ (ಆರ್ಥಿಕ ಅಪರಾಧಗಳು) ಮುಂದೆ ಹಾಜರುಪಡಿಸಲಾಗುವುದು. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.