ನವದೆಹಲಿ: ಶಿಲ್ಲಾಂಗ್ ನ ಈಶಾನ್ಯ ವಲಯದ ಕಸ್ಟಮ್ಸ್ ಅಡಿಯಲ್ಲಿ ಇಂಫಾಲ್ ಕಸ್ಟಮ್ಸ್ ನ ಕಳ್ಳಸಾಗಣೆ ವಿರೋಧಿ ಘಟಕವು 5.99 ಕೋಟಿ ರೂಪಾಯಿ ಮೌಲ್ಯದ 454 ಕೆಜಿ ತೂಕದ 69 ಚಿನ್ನದ ಬಿಸ್ಕೆಟ್ ಗಳನ್ನು ವಶಪಡಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಣಿಪುರದ ಚಾಂದೇಲ್ ಜಿಲ್ಲೆಯ ತಮ್ನಾಪೊಕ್ಪಿ ಎಂಬಲ್ಲಿ ವ್ಯಾನ್ ನ ಎಂಜಿನ್ ಚೇಂಬರ್ ನಲ್ಲಿ ಚಿನ್ನದ ಬಿಸ್ಕೆಟ್ ಗಳನ್ನು ಬಚ್ಚಿಡಲಾಗಿತ್ತು.
ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಪ್ರಕರಣ ದಾಖಲಿಸಲಾಗಿದೆ. ವ್ಯಾನ್ ನ ನಿಜವಾದ ಮಾಲೀಕನನ್ನು ಕಂಡುಹಿಡಿಯಲು ತನಿಖೆ ನಡೆಯುತ್ತಿದೆ.