ಹೊಸದಿಲ್ಲಿ: ಭಾರತೀಯ ಜನತಾ ಪಕ್ಷ (ಬಿಜೆಪಿ) ಮಣಿಪುರ ಘಟಕದ ಇಬ್ಬರು ಬಿಜೆಪಿ ಸದಸ್ಯರನ್ನು ಕೆಲವು ಅಪರಿಚಿತ ವ್ಯಕ್ತಿಗಳು ತೀವ್ರವಾಗಿ ಥಳಿಸಿದ್ದಾರೆ ಎಂದು ಪೊಲೀಸ್ ವರದಿ ತಿಳಿಸಿದೆ.
ಬಿಜೆಪಿ ವಕ್ತಾರ ಎಂ.ಸುರೇಶ್ ಕುಮಾರ್ ಮತ್ತು ಪಕ್ಷದ ಯುವ ಘಟಕದ ಕಚೇರಿ ಕಾರ್ಯದರ್ಶಿ ನಿಂಗೊಂಬಮ್ ಅಲೆಕ್ಸ್ ಅವರು ನಿತ್ಯಪತ್ ಚುತೆಕ್‌ನಲ್ಲಿರುವ ಬಿಜೆಪಿ ಕಚೇರಿಯಲ್ಲಿ ತಡರಾತ್ರಿ ನಡೆದ ಸಭೆ ಮುಗಿಸಿ ಕಾರಿನಲ್ಲಿ ಮನೆಗೆ ಮರಳುತ್ತಿದ್ದಾಗ ಕೆಲವರು ಅಡ್ಡಗಟ್ಟಿದ್ದಾರೆ.
ಐಎಎನ್‌ಎಸ್‌ನೊಂದಿಗೆ ಮಾತನಾಡಿದ ಮಣಿಪುರ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್, “ಇದೊಂದು ಅತ್ಯಂತ ದುರದೃಷ್ಟಕರ ಘಟನೆ. ನಮ್ಮ ಇಬ್ಬರು ಸದಸ್ಯರನ್ನು ಕತ್ತಲೆಯಲ್ಲಿ ಥಳಿಸಲಾಗಿದೆ. ಇದು ಜನಪರ ಆಡಳಿತದಲ್ಲಿನ ಕೀಳರಿಮೆಯನ್ನು ತೋರಿಸುತ್ತದೆ. ಆರಂಭಿಕ ವರದಿಗಳ ಪ್ರಕಾರ ಶಂಕಿತ ವ್ಯಕ್ತಿಗಳು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನವರು. ಶಂಕಿತ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ ಮತ್ತು ಶಿಕ್ಷೆಯನ್ನು ನೀಡಲಾಗುವುದು.”
ಗಾಯಗೊಂಡ ಇಬ್ಬರನ್ನು ತಕ್ಷಣವೇ ಮಣಿಪುರದ ಇಂಫಾಲ್‌ನಲ್ಲಿರುವ ರಾಜ್ ಮೆಡಿಸಿಟಿ ಆಸ್ಪತ್ರೆಗೆ ಸಾಗಿಸಲಾಯಿತು. ಸುರೇಶ್ ಕುಮಾರ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ತೀವ್ರ ನಿಗಾ ಘಟಕಕ್ಕೆ ರವಾನಿಸಲಾಗಿದೆ.