ಹೊಸದಿಲ್ಲಿ: ಗೂಗಲ್ ಸಂಸ್ಥೆಯು ಪರಿಶೀಲನೆಗೆ ಒಳಪಟ್ಟ ಜಾಹೀರಾತುಗಳಿಗೆ ನೀಲಿ ಚೆಕ್ ಗುರುತು ಪ್ರದರ್ಶನ ಪ್ರಯೋಗವನ್ನು ಮಾಡುತ್ತಿದೆ. ನೀಲಿ ಬ್ಯಾಡ್ಜ್‌ಗಳು ಜಾಹೀರಾತು ಪರಿಶೀಲನೆ ಭಾಗವಾಗಿದೆ ಎಂದು ಕಂಪನಿ ಹೇಳಿದೆ.
ಎಸ್‌ಇಒ ವಿಶ್ಲೇಷಕ ಖುಶಾಲ್ ಭೆರ್ವಾನಿ ಅವರು ಪರಿಶೀಲಿಸಲಾದ ಜಾಹೀರಾತು ನೀಲಿ ಚೆಕ್‌ಮಾರ್ಕ್ ಅಳವಡಿಕೆಯನ್ನು ಗುರುತಿಸಿದ್ದರು. ಗೂಗಲ್ ಸಂಸ್ಥೆ ತಾನು ಪರಿಶೀಲಿಸಿದ ಜಾಹೀರಾತುಗಳನ್ನು ಪ್ರಕಟಿಸಲು ನೀಲಿ ಟಿಕ್ ಮಾರ್ಕ್ ತೋರಿಸುತ್ತಿದೆ ಎಂದು ಟ್ವಿಟರ್‌ನಲ್ಲಿ ಈ ಕುರಿತು ವಿವರಿಸಿದ್ದಾರೆ. ಆದರೆ ಗೂಗಲ್ ಅಧಿಕೃತವಾಗಿ ಈ ನಿಟ್ಟಿನಲ್ಲಿ ವಿವರ ಹೊರಹಾಕಿಲ್ಲ ಬ್ಲೂ ಬ್ಯಾಡ್ಜ್ ಜಾಹೀರಾತು ಚೆಕ್ ಮಾರ್ಕ್ ಹೊಂದಿರದ ಇತರ ಜಾಹೀರಾತುಗಳಿಂದ ಎದ್ದು ಕಾಣುವಂತೆ ಸಹಾಯ ಮಾಡುತ್ತದೆ ಎನ್ನಲಾಗಿದೆ.
ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ಕಳೆದ ತಿಂಗಳು ಕಂಪನಿಯು ಯುಎಸ್ ಮೂಲದ ಬಳಕೆದಾರರಿಗೆ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ಗಾಗಿ ಪಾವತಿಸಿದ ಚಂದಾದಾರಿಕೆ ಯೋಜನೆ ಹೊರತರುತ್ತಿದೆ ಎಂದು ಘೋಷಿಸಿದ್ದರು.