ಗಾಂಧಿನಗರ: ಗುಜರಾತ್‌ನ ರಾಜ್‌ಕೋಟ್‌ನಲ್ಲಿ ಭಾನುವಾರ ಮಧ್ಯಾಹ್ನ 4.3 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ.
ಫೆಬ್ರವರಿ 26 ರಂದು ಮಧ್ಯಾಹ್ನ 3 ಗಂಟೆ 21 ನಿಮಿಷ 12 ಸೆಕೆಂಡ್ ಗೆ ಭೂಕಂಪ ಉಂಟಾಗಿದೆ.
10 ಕಿಮೀ ಆಳದಲ್ಲಿ ಭೂಕಂಪ ಸಂಭವಿಸಿದೆ. ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರದ ಪ್ರಕಾರ, ಕಂಪನವು ಗುಜರಾತ್‌ನ ರಾಜ್‌ಕೋಟ್‌ನ ಸುಮಾರು 270 ಕಿಲೋಮೀಟರ್ ವಾಯುವ್ಯಕ್ಕೆ(NNW) ಅದರ ಕೇಂದ್ರಬಿಂದುದೊಂದಿಗೆ ದಾಖಲಾಗಿದೆ. ಇಲ್ಲಿಯವರೆಗೆ ಯಾವುದೇ ಸಾವು ನೋವುಗಳು ವರದಿಯಾಗಿಲ್ಲ.