News Kannada
Tuesday, November 29 2022

ಜಮ್ಮು-ಕಾಶ್ಮೀರ

ಕಾಶ್ಮೀರದಲ್ಲಿ ಆರು ಮಂದಿ ಎಲ್‌ಇಟಿ ಭಯೋತ್ಪಾದಕರು ಸೆರೆ - 1 min read

Photo Credit :

ನಿಷೇಧಿತ ಸಂಘಟನೆ ಲಷ್ಕರ್-ಎ-ತೊಯ್ಬಾದೊಂದಿಗೆ ಸಂಪರ್ಕ ಇರಿಸಿಕೊಂಡು ಉಗ್ರ ಚಟುವಟಿಕೆಗಳಲ್ಲಿ ತೊಡಗಿದ್ದ ಆರು ಮಂದಿಯನ್ನು ದಕ್ಷಿಣ ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ಪೊಲೀಸರು ಸೆರೆಹಿಡಿದಿದ್ದಾರೆ.

ಪುಲ್ವಾಮದ ಲೆಲ್ಹರ್ ಕಾಕಪೋರಾ ನಿವಾಸಿ ರೂಫ್‌ ಅಹ್ಮದ್‌ ಲೋನ್‌, ಆಲೋಚಿಬಾಗ್‌ ಪಾಂಪೊರೆ ನಿವಾಸಿ ಆಕಿಬ್‌ ಮಕ್ಬೂಲ್‌ ಭಟ್‌, ಲಾರ್ವೆ ಕಾಕಪೋರಾ ನಿವಾಸಿಗಳಾದ ಜಾವೇದ್‌ ಅಹ್ಮದ್‌ ದಾರ್‌, ಸಜಾದ್‌ ಅಹ್ಮದ್‌ ದಾರ್‌, ಪುಲ್ವಾಮದ ಪರಿಗಾಮ್‌ ನಿವಾಸಿಗಳಾದ ಅರ್ಷಿದ್‌ ಅಹ್ಮದ್‌ ಮಿರ್‌, ರಮೀಜ್‌ ರಾಜಾ ಬಂಧಿತರು.

‘ಬಂಧಿತರು ಉಗ್ರರಿಗೆ ಆಶ್ರಯ ನೀಡಿದ್ದಲ್ಲದೆ, ಹಣಕಾಸು ಸಹಾಯ, ಹಣ ವರ್ಗಾವಣೆ ಗೆ ಸಹಾಯ ಮಾಡುತ್ತಿದ್ದುದಲ್ಲದೆ ಯುವಕರನ್ನು ಉಗ್ರ ಚಟುವಟಿಕೆಗೆ ಸೆಳೆಯುವ ಕೃತ್ಯದಲ್ಲಿ ತೊಡಗಿಕೊಂಡಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

ಬಂಧಿತರು ಎಲ್‌ಇಟಿಯ ಭಯೋತ್ಪಾದಕ ಕಮಾಂಡರ್ ರಿಯಾಜ್ ಅಹ್ಮದ್ ದಾರ್ ನಿರ್ದೇಶನದಂತೆ ಕಾರ್ಯ ನಿರ್ವಹಿಸುತ್ತಿದ್ದರು ಮತ್ತು ಅತನೊಂದಿಗೆ ನಿರಂತರ ಸಂಪರ್ಕದಲಿದ್ದು ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

See also  ಭದ್ರತಾ ಪಡೆಗಳ ಎನ್‌ಕೌಂಟರ್‌ನಲ್ಲಿ ಇಬ್ಬರು ಉಗ್ರರ ಹತ್ಯೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

12792
NewsKannada

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು