News Kannada
Friday, February 03 2023

ಮಹಾರಾಷ್ಟ್ರ

ಮಹಾರಾಷ್ಟ್ರ: ಮೂರೂವರೆ ವರ್ಷದ ಮಗು ಸೇರಿದಂತೆ ಏಳು ಹೊಸ ಒಮಿಕ್ರಾನ್ ಪ್ರಕರಣ ವರದಿ

Photo Credit :

ನವದೆಹಲಿ : ಮಹಾರಾಷ್ಟ್ರವು ಶುಕ್ರವಾರ ಮೂರೂವರೆ ವರ್ಷದ ಮಗು ಸೇರಿದಂತೆ ಒಮಿಕ್ರಾನ್ʼನ ಏಳು ಹೊಸ ಪ್ರಕರಣಗಳು ವರದಿಯಾಗಿದ್ದು, ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 17ಕ್ಕೆ ತಲುಪಿದೆ. 7 ಹೊಸ ಪ್ರಕರಣಗಳಲ್ಲಿ ಮೂರು ಮುಂಬೈ ಮತ್ತು ಉಳಿದವು ಪುಣೆಯ ಪಿಂಪ್ರಿ ಚಿಂಚ್ವಾಡ್ʼನಿಂದ ಬಂದಿವೆ.

ಇನ್ನು ಮುಂಬೈನ ಎಲ್ಲಾ ಮೂವರು ಒಮಿಕ್ರಾನ್ ರೋಗಿಗಳು ಕ್ರಮವಾಗಿ ತಾಂಜೇನಿಯಾ, ಯುಕೆ ಮತ್ತು ದಕ್ಷಿಣ ಆಫ್ರಿಕಾ-ನೈರೋಬಿಯಿಂದ ಪ್ರಯಾಣದ ಇತಿಹಾಸವನ್ನ ಹೊಂದಿದ್ದಾರೆ. ಅಂದ್ಹಾಗೆ, ಮುಂಬೈನಲ್ಲಿ ಈಗ ಅಪಾಯಕಾರಿ ರೂಪಾಂತರದ ಐದು ಪ್ರಕರಣಗಳಿವೆ. ಇಂದು ದಾಖಲಾದ 7 ಜನರಲ್ಲಿ ನಾಲ್ಕು ರೋಗಿಗಳು ರೋಗ ಲಕ್ಷಣರಹಿತರಾಗಿದ್ರೆ, ಮೂವರು ಸೌಮ್ಯ ರೋಗ ಲಕ್ಷಣಗಳನ್ನ ಹೊಂದಿದ್ದಾರೆ.

ಪುಣೆಯ ಇತರ 4 ರೋಗಿಗಳು ನೈಜೀರಿಯಾದ ಮಹಿಳೆಯರ ಸಂಪರ್ಕದಲ್ಲಿದ್ದು, ಆಕೆಗೆ ಈಗಾಗಲೇ ಒಮಿಕ್ರಾನ್ ದೃಢಪಟ್ಟಿದೆ. ಇನ್ನು 7 ರೋಗಿಗಳಲ್ಲಿ 4 ರೋಗಿಗಳು ಸಂಪೂರ್ಣ ಲಸಿಕೆ ಪಡೆದಿದ್ದಾರೆ. ಉಳಿದ ಮೂವರಲ್ಲಿ, ಒಬ್ಬರು ಲಸಿಕೆಯ ಒಂದು ಡೋಸ್ ಪಡೆದಿದ್ರೆ, ಇನ್ನೊಬ್ಬರು ಲಸಿಕೆ ಪಡೆದಿಲ್ಲ. ಇನ್ನು ಮೂರನೆಯದು 3 ವರ್ಷದ ಮಗುವಾಗಿದ್ದರಿಂದ ಲಸಿಕೆಗೆ ಅರ್ಹರಲ್ಲ.

See also  ಮತ್ತೆ ಪೆಟ್ರೋಲ್, ಡೀಸೆಲ್ ದರ ಏರಿಕೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12790
NewsKannada

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು