ಮುಂಬೈ: ಮಹಾರಾಷ್ಟ್ರದ ಒಮಿಕ್ರಾನ್ ಕೇಸ್ ಲೋಡ್ ನಿರಂತರವಾಗಿ ಹೆಚ್ಚುತ್ತಿರುವ ಕಾರಣ, ಡಿಸೆಂಬರ್ 11 ಮತ್ತು 12 ರಂದು ಮುಂಬೈನಲ್ಲಿ ಅಪರಾಧ ಪ್ರಕ್ರಿಯಾ ಸಂಹಿತೆಯ (CrPC) ಸೆಕ್ಷನ್ 144 ಅನ್ನು ವಿಧಿಸಲಾಗಿದೆ.ಉಲ್ಲಂಘಿಸುವವರಿಗೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 188 ಮತ್ತು ಇತರ ಕಾನೂನು ನಿಬಂಧನೆಗಳ ಅಡಿಯಲ್ಲಿ ಶಿಕ್ಷೆ ವಿಧಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಓಮಿಕ್ರಾನ್ ಹೆಚ್ಚಳ, ಕಾನೂನು ಮತ್ತು ಸುವ್ಯವಸ್ಥೆಯ ಕಾರಣ ಮುಂಬೈನಲ್ಲಿ ಎರಡು ದಿನಗಳ ಕಾಲ ಸೆಕ್ಷನ್ 144 ಜಾರಿಗೊಳಿಸಲಾಗಿದೆ
ನಿಷೇಧಾಜ್ಞೆ ಜಾರಿಯಾದ ಸಂದರ್ಭದಲ್ಲಿ ಮುಂಬೈನಲ್ಲಿ ಜನರು ಮತ್ತು ವಾಹನಗಳನ್ನು ಒಳಗೊಂಡ ರ್ಯಾಲಿಗಳು ಮತ್ತು ಪ್ರತಿಭಟನಾ ಮೆರವಣಿಗೆಗಳನ್ನು ನಿಷೇಧಿಸಲಾಗಿದೆ.
ಉಪ ಪೊಲೀಸ್ ಆಯುಕ್ತರು (ಕಾರ್ಯಾಚರಣೆ) ಹೊರಡಿಸಿರುವ ಆದೇಶವು ಶನಿವಾರ ಮತ್ತು ಭಾನುವಾರ 48 ಗಂಟೆಗಳ ಕಾಲ ಜಾರಿಯಲ್ಲಿರುತ್ತದೆ.
‘ ಕೊವೀಡ್-19-19 ನ ಹೊಸ ಓಮಿಕ್ರಾನ್ ರೂಪಾಂತರದಿಂದ ಆಗುವ ಅಪಾಯವನ್ನು ತಡೆಗಟ್ಟಲು ಮತ್ತು ಅಮರಾವತಿ, ಮಾಲೆಗಾಂವ್ ಮತ್ತು ನಾಂದೇಡ್‌ನಲ್ಲಿ ನಡೆದ ಹಿಂಸಾಚಾರದ ಹಿನ್ನೆಲೆಯಲ್ಲಿ 144 ಸೆಕ್ಷನ್ ಜಾರಿಯಾಗಿದೆ’ ಎಂದು ಅವರು ಹೇಳಿದರು.
ಏತನ್ಮಧ್ಯೆ, ಮಹಾರಾಷ್ಟ್ರವು ಕೊವೀಡ್-19-19 ನ ಒಮಿಕ್ರಾನ್ ರೂಪಾಂತರದ ಏಳು ಹೊಸ ಪ್ರಕರಣಗಳನ್ನು ವರದಿ ಮಾಡಿದೆ, ಇದರಲ್ಲಿ ಒಂದೂವರೆ ವರ್ಷದ ಪುಟ್ಟ ಮಗು ಸೇರಿದಂತೆ – ಮುಂಬೈನಿಂದ ಮೂರು ಮತ್ತು ಪಿಂಪ್ರಿ ಚಿಂಚ್‌ವಾಡ್ ಮುನ್ಸಿಪಲ್ ಕಾರ್ಪೊರೇಷನ್‌ನಿಂದ ನಾಲ್ಕು ಜನರಿಗೆ ತಗುಲಿದೆ . ರಾಜ್ಯದಲ್ಲಿ 17 ಕ್ಕೆ ತಲುಪಿದೆ.
ಏಳರಲ್ಲಿ ನಾಲ್ವರು ಲಕ್ಷಣರಹಿತರಾಗಿದ್ದರೆ ಮೂರರಲ್ಲಿ ಸೌಮ್ಯ ಲಕ್ಷಣಗಳಿವೆ.
ಈ ಹೊಸ ಪ್ರಕರಣಗಳಲ್ಲಿ, ನಾಲ್ಕು ಜನ ಸಂಪೂರ್ಣವಾಗಿ ಲಸಿಕೆಯನ್ನು ಪಡೆದಿದ್ದಾರೆ, ಒಬ್ಬರು COVID-19 ವಿರುದ್ಧ ಒಂದೇ ಡೋಸ್ ಹಾಕಿಸಿಕೊಂಡಿದ್ದಾರೆ ಮತ್ತು ಇನ್ನೊಂದು ಲಸಿಕೆ ಹಾಕಿಲ್ಲ.ಇನ್ನೊಂದು ಮಗು ವ್ಯಾಕ್ಸಿನೇಷನ್‌ಗೆ ಅರ್ಹವಾಗಿಲ್ಲ.