ಪುಣೆ: ಕಳೆದ ವರ್ಷ ಎರಡೂವರೆ ವರ್ಷದ ಬಾಲಕಿಯೊಬ್ಬಳನ್ನು ಅತ್ಯಾಚಾರ ಮಾಡಿ ಹತ್ಯೆಗೈದ ಆರೋಪದಲ್ಲಿ ಇಲ್ಲಿನ ವಿಶೇಷ ಪೋಕ್ಸೊ ನ್ಯಾಯಾಲಯ ವ್ಯಕ್ತಿಯೊಬ್ಬನಿಗೆ ಮರಣದಂಡನೆ ವಿಧಿಸಿದೆ.
ಈ ಪ್ರಕರಣದಲ್ಲಿ ಆರೋಪಿ ಸಂಜಯ್ ಬಾಬನ್ ಕಾಟ್ಕರ್ (38) ಎಂಬಾತ ದೋಷಿ ಎಂದು ಪ್ರಧಾನ ಜಿಲ್ಲಾ ನ್ಯಾಯಾಧೀಶ (ಪೋಕ್ಸೊ ಪ್ರಕರಣಗಳ ವಿಶೇಷ ನ್ಯಾಯಾಧೀಶ) ಸಂಜಯ್ ದೇಶ್‌ಮುಖ್ ಅವರು ತೀರ್ಪು ನೀಡಿ ಶಿಕ್ಷೆ ವಿಧಿಸಿದ್ದಾರೆ.
2021ರ ಫೆಬ್ರುವರಿ 15 ರಂದು ಆರೋಪಿಯು ಬಾಲಕಿಯನ್ನು ಅಪಹರಿಸಿ ಆಕೆಯ ಮೇಲೆ ಅತ್ಯಾಚಾರ ನಡೆಸಿ ಹತ್ಯೆ ಮಾಡಿದ್ದಾನೆ. ಬಾಲಕಿಯ ದೇಹದ ಮೇಲೆ 11 ಗಾಯದ ಗುರುತುಗಳಿವೆ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ವಿಲಾಸ್ ಪತ್ತಾರೆ ಹೇಳಿದರು.