News Kannada
Saturday, February 04 2023

ಮಹಾರಾಷ್ಟ್ರ

ಮುಂಬೈ: ಖಾದ್ಯ ತೈಲದ ಟ್ಯಾಂಕರ್ ಪಲ್ಟಿ

Photo Credit :

ಮುಂಬೈ: ಖಾದ್ಯ ತೈಲ ಸಾಗಣೆ ಮಾಡುತ್ತಿದ್ದ ಟ್ಯಾಂಕರ್ ಮಹಾರಾಷ್ಟ್ರದ ಮುಂಬೈ-ಅಹ್ಮದಾಬಾದ್ ಹೆದ್ದಾರಿಯಲ್ಲಿ ಟ್ಯಾಂಕರ್ ಪಲ್ಟಿ ಹೊಡೆದಿದ್ದು, ರಸ್ತೆಯಲ್ಲಿ ಬಿದ್ದಿದ್ದ ಟ್ಯಾಂಕರ್ ನಿಂದ ಖಾದ್ಯ ತೈಲವನ್ನು ಸ್ಥಳೀಯರು ಲೂಟಿ ಮಾಡಿದ್ದಾರೆ.

ಹೆದ್ದಾರಿಯಲ್ಲಿ ಈ ಘಟನೆ ನಡೆದಿದ್ದರ ಪರಿಣಾಮ ಮೂರು ಗಂಟೆಗಳ ಕಾಲ ವಾಹನ ದಟ್ಟಣೆ ಉಂಟಾಗಿತ್ತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಶನಿವಾರ ಈ ಘಟನೆ ನಡೆಯುತ್ತಿದ್ದಂತೆಯೇ ಸ್ಥಳೀಯರು ಸ್ಥಳಕ್ಕೆ ಧಾವಿಸಿ ಸೋರುತ್ತಿದ್ದ ಖಾದ್ಯ ತೈಲವನ್ನು ತುಂಬಿಸಿಕೊಂಡು ಹೋಗಿದ್ದಾರೆ.

ಟ್ಯಾಂಕರ್ ನಲ್ಲಿ 12,000 ಲೀಟರ್ ಗಳಷ್ಟು ಖಾದ್ಯ ತೈಲವಿತ್ತು. ಗುಜರಾತ್ ನ ಸೂರತ್ ನಿಂದ ಮುಂಬೈ ಗೆ ಇದನ್ನು ಸಾಗಿಸಲಾಗುತ್ತಿದ್ದಾಗ ತಾವಾ ಗ್ರಾಮದ ಬಳಿ ನಿಯಂತ್ರಣ ತಪ್ಪಿ, ಪಲ್ಟಿ ಹೊಡೆದಿದೆ. ಈ ವೇಳೆ ಗ್ರಾಮದ ಹಲವರು ಕ್ಯಾನ್ ತಂದು ಖಾದ್ಯ ತೈಲವನ್ನು ತುಂಬಿಸಿಕೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

See also  ಮಹಾರಾಷ್ಟ್ರ: ಒಂದೇ ಕುಟುಂಬದ ಐವರು ಕ್ವಾರಿಯಲ್ಲಿ ಮುಳುಗಿ ಸಾವು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1616

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು