News Kannada
Friday, March 31 2023

ಪಂಜಾಬ್

ಪತ್ನಿಯ ಅನುಮತಿ ಇಲ್ಲದೆಯೇ ಕಾಲ್​ ರೆಕಾರ್ಡ್ ಮಾಡುವುದು ಕಾನೂನು ಬಾಹಿರ

Photo Credit :

ಪತ್ನಿಯ ನಕಾರಾತ್ಮಕ ಗುಣಗಳನ್ನು ತೋರಿಸುವ ಸಲುವಾಗಿ ಆಕೆಯ ಅನುಮತಿ ಇಲ್ಲದೆಯೇ ಆಕೆಯ ಕಾಲ್​ ರೆಕಾರ್ಡ್ ಮಾಡುವುದು ಖಾಸಗಿತನದ ಉಲ್ಲಂಘನೆಯಾಗಿದೆ ಎಂದು ಪಂಜಾಬ್​ನ ಹೈಕೋರ್ಟ್​ ಹೇಳಿದೆ. ಈ ಮೂಲಕ ಪತ್ನಿಯ ಕಾಲ್​ ರೆಕಾರ್ಡ್​ನ್ನು ಸಾಕ್ಷ್ಯ ಎಂದು ಪರಿಗಣಿಸಿದ್ದ, ಕುಟುಂಬ ನ್ಯಾಯಾಲಯದ ಆದೇಶವನ್ನು ರದ್ದು ಮಾಡಿದೆ.

ಪಂಜಾಬ್​ ಹಾಗೂ ಹರಿಯಾಣ ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದ ಮಹಿಳೆಯು ತನ್ನ ಹಾಗೂ ಪತಿಯ ನಡುವೆ ವೈವಾಹಿಕ ಸಂಬಂಧ ಸರಿಯಾಗಿಲ್ಲ ಎಂದು ದೂರಿದ್ದರು.

ಈ ವಿವಾದ ನಡೆಯುತ್ತಿರುವಾಗಲೇ ಬಟಿಂಡಾ ಕೌಟುಂಬಿಕ ನ್ಯಾಯಾಲಯದಲ್ಲಿ ಪತಿಯು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಈ ವೇಳೆ ಪತಿಯು ತಮ್ಮ ಪತ್ನಿಯ ಕಾಲ್​ ರೆಕಾರ್ಡಿಂಗ್​ನ್ನು ಸಾಕ್ಷ್ಯದ ರೂಪದಲ್ಲಿ ಪ್ರಸ್ತುತ ಪಡಿಸಿದ್ದರು. ಇದನ್ನು ಕೌಟುಂಬಿಕ ನ್ಯಾಯಾಲಯ ಸಾಕ್ಷ್ಯ ಎಂದು ಪರಿಗಣಿಸಿತ್ತು. ಆದರೆ ಈ ಆದೇಶವನ್ನು ಪಂಜಾಬ್​ ಹಾಗೂ ಹರಿಯಾಣ ಹೈಕೋರ್ಟ್ ತಳ್ಳಿ ಹಾಕಿದೆ.

ಕಾಲ್​ ರೆಕಾರ್ಡಿಂಗ್​ನ್ನು ಪ್ರಸ್ತುತ ಪಡಿಸುವ ಮೂಲಕ ಪತ್ನಿಯು ತಪ್ಪಿತಸ್ಥೆ ಎಂಬುದನ್ನು ಈ ಸಂಭಾಷಣೆಯ ಮೂಲಕ ಸಾಬೀತುಪಡಿಸಲು ಮುಂದಾಗಿದ್ದ ಪತಿಯ ನಡೆ ವಿರುದ್ಧ ಆಶ್ಚರ್ಯ ವ್ಯಕ್ತಪಡಿಸಿದ ಪಂಜಾಬ್​ ಹಾಗೂ ಹರಿಯಾಣ ಹೈಕೋರ್ಟ್, ಒಬ್ಬ ವ್ಯಕ್ತಿಯ ಖಾಸಗಿತನದ ಹಕ್ಕನ್ನು ಹೇಗೆ ಉಲ್ಲಂಘನೆ ಮಾಡಲು ಸಾಧ್ಯ..? ಎಂದು ಪ್ರಶ್ನೆ ಮಾಡಿದೆ.

ಸಂಗಾತಿಯ ಒಪ್ಪಿಗೆ ಇಲ್ಲದೆಯೇ ಆಕೆಯ ಕಾಲ್​ ರೆಕಾರ್ಡ್​ನ್ನು ಪರಿಶೀಲಿಸುವುದು ಖಾಸಗಿತನದ ಹಕ್ಕಿನ ಉಲ್ಲಂಘನೆಯಾಗಿದೆ. ವಿಚ್ಚೇದನ ಪ್ರಕರಣ ಕುರಿತಂತೆ ಆರು ತಿಂಗಳ ಒಳಗಾಗಿ ನಿರ್ಧಾರ ತೆಗೆದುಕೊಳ್ಳುವಂತೆ ಬಂಟಿಂಡಾ ಕೌಟುಂಬಿಕ ನ್ಯಾಯಾಲಯಕ್ಕೆ ಹೈಕೋರ್ಟ್ ಸೂಚನೆ ನೀಡಿದೆ. ಹಾಗೂ ಫೋನ್​ ರೆಕಾರ್ಡಿಂಗ್​ನ್ನು ಯಾವುದೇ ಕಾರಣಕ್ಕೂ ಸಾಕ್ಷ್ಯವೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಹೇಳಿದೆ.

See also  ಪಂಜಾಬ್: ರಾಜೀನಾಮೆ ನೀಡಲು ಸಜ್ಜಾದ ಸಿಎಂ ಚರಣ್ ಜೀತ್ ಸಿಂಗ್ ಚನ್ನಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12790
NewsKannada

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು