News Kannada
Thursday, March 23 2023

ತಮಿಳುನಾಡು

ತಮಿಳುನಾಡು: 12-15 ವಯಸ್ಸಿನ ಮಕ್ಕಳಿಗೆ 3.89 ಲಕ್ಷ ಡೋಸ್ ಕಾರ್ಬೆವಾಕ್ಸ್ ಲಸಿಕೆ

Photo Credit :

ಚೆನ್ನೈ (ತಮಿಳುನಾಡು): ತಮಿಳುನಾಡಿನ 12-15 ವಯಸ್ಸಿನ ಮಕ್ಕಳಿಗೆ ನೀಡಲು 3.89 ಲಕ್ಷ ಡೋಸ್ ಕಾರ್ಬೆವಾಕ್ಸ್ ಲಸಿಕೆಯನ್ನು ರಾಜ್ಯ ಸ್ವೀಕರಿಸಿದೆ. 12 ರಿಂದ 18 ವಯಸ್ಸಿನ ಮಕ್ಕಳಿಗೆ ನೀಡಲು ಕಾರ್ಬೆವಾಕ್ಸ್‌ ಕೋವಿಡ್​ ಲಸಿಕೆಗೆ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ  ಈಗಾಗಲೇ ಅನುಮೋದನೆ ನೀಡಿದೆ.

ಕೇಂದ್ರ ಸರ್ಕಾರವು ರಾಜ್ಯದಲ್ಲಿ 12-18 ವರ್ಷದ ಮಕ್ಕಳಿಗೆ 21.66 ಲಕ್ಷ ಡೋಸ್ ಕಾರ್ಬೆವಾಕ್ಸ್ ಲಸಿಕೆಯನ್ನು ನಿಗದಿಪಡಿಸಿದ್ದು, 3.89 ಲಕ್ಷ ಡೋಸ್ ಸಿಕ್ಕಿದೆ. ಕೇಂದ್ರವು ಮಾರ್ಗಸೂಚಿಗಳನ್ನು ಹೊರಡಿಸಿದ ನಂತರ ಮಕ್ಕಳಿಗೆ ಲಸಿಕೆಯನ್ನು ನೀಡಲಾಗುವುದು ಎಂದು ತಮಿಳುನಾಡು ಆರೋಗ್ಯ ಸಚಿವ ಮಾ ಸುಬ್ರಮಣಿಯನ್ ಹೇಳಿದ್ದಾರೆ.

ರಾಜ್ಯದಲ್ಲಿ 15-18 ವರ್ಷದೊಳಗಿನ 33.46 ಲಕ್ಷ ಮಕ್ಕಳು ಲಸಿಕೆಗೆ ಅರ್ಹರಾಗಿದ್ದಾರೆ. ಈ ಪೈಕಿ ಶೇ.82.27 ರಷ್ಟು ಮಕ್ಕಳು ಮೊದಲ ಡೋಸ್ ಹಾಗೂ ಶೇ.37.64ರಷ್ಟು ಮಕ್ಕಳಿಗೆ ಎರಡೂ ಡೋಸ್​ಗಳನ್ನು ನೀಡಲಾಗಿದೆ ಎಂದು ಅವರು ತಿಳಿಸಿದರು.

See also  ಅಸ್ಟ್ರಾಜೆನೆಕಾ ಕೋವಿಶೀಲ್ಡ್ ಅನ್ನು ಅನುಮೋದಿತ ಕೋವಿಡ್ -19 ಲಸಿಕೆಯಾಗಿ-ಯುಕೆ ಸರ್ಕಾರ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12795
NewsKannada

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು