News Kannada
Friday, September 30 2022

ತೆಲಂಗಾಣ

ತೆಲಂಗಾಣ ಬಿಜೆಪಿ ಮುಖಂಡ ಜಿಟ್ಟಾ ಬಾಲಕೃಷ್ಣ ರೆಡ್ಡಿ ಬಂಧನ - 1 min read

Photo Credit :

ಹೈದರಾಬಾದ್: ತೆಲಂಗಾಣ  ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರಿಗೆ ಅವಹೇಳನ ಮಾಡಿದ ಆರೋಪದ ಮೇಲೆ ತೆಲಂಗಾಣ ರಾಜ್ಯ ಘಟಕದ ಬಿಜೆಪಿ ಅಧ್ಯಕ್ಷ ಬಂಡಿ ಸಂಜಯ್‌ ಕುಮಾರ್‌ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮುಖಂಡ ಜಿಟ್ಟಾ ಬಾಲಕೃಷ್ಣ ರೆಡ್ಡಿ ಅವರನ್ನು ತೆಲಂಗಾಣ ಪೊಲೀಸರು ಬಂಧಿಸಿದ್ದಾರೆ.

ಬಂಡಿ ಸಂಜಯ್ ಕುಮಾರ್‌ ನೇತೃತ್ವದಲ್ಲಿ ಜೂನ್ 2 ರಂದು ಬಿಜೆಪಿ ರಾಜ್ಯ ಘಟಕವು ಕಿರುನಾಟಕ ಒಂದನ್ನು ಪ್ರದರ್ಶನ ಮಾಡಿತ್ತು. ಇದರಲ್ಲಿ ಸಿಎಂ ಕೆಸಿಆರ್‌ ಅವರನ್ನು ಅವಹೇಳನ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ಸಾಂವಿಧಾನಿಕ ಹುದ್ದೆಯನ್ನು ಹೊಂದಿರುವ ಮತ್ತು ರಾಜ್ಯದ ಜನರಿಂದ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ವ್ಯಕ್ತಿಯನ್ನು ಕಿರುನಾಟಕದಲ್ಲಿ ಅವಮಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಿರುನಾಟಕದ ವಿಚಾರವಾಗಿ ಟಿಆರ್‌ಎಸ್ ಸಾಮಾಜಿಕ ಮಾಧ್ಯಮ ವಿಭಾಗದ ಸದಸ್ಯ ವೈ. ಸತೀಶ್ ರೆಡ್ಡಿ ಹಯತ್‌ನಗರದ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಬಂಡಿ ಸಂಜಯ್‌, ಜಿಟ್ಟಾ ಬಾಲಕೃಷ್ಣ ರೆಡ್ಡಿ, ರಾಣಿ ರುದ್ರಮ್ಮ ಅವರನ್ನು ದೂರಿನಲ್ಲಿ ಹೆಸರಿಸಲಾಗಿದೆ.

See also  ಹೈದರಾಬಾದ್: ಮಗನ ಕಣ್ಣಿಗೆ ಖಾರದ ಪುಡಿ ಹಾಕಿದ ತಾಯಿ!
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

12790
NewsKannada

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು