ಲಕ್ನೋ: ಮಾಜಿ ಮುಖ್ಯಮಂತ್ರಿ, ದಿವಂಗತ ಕಲ್ಯಾಣ್ ಸಿಂಗ್ ಹೆಸರನ್ನು ಉತ್ತರ ಪ್ರದೇಶದ ಆರು ಜಿಲ್ಲೆಗಳ ರಸ್ತೆಗೆ ಇಡಲಾಗುತ್ತಿದೆ. ಲಕ್ನೋ ಮತ್ತು ಅಯೋಧ್ಯೆ ಸೇರಿದಂತೆ ಆರು ಜಿಲ್ಲೆಗಳಲ್ಲಿ ತಲಾ ಒಂದು ರಸ್ತೆಗೆ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಅವರ ಹೆಸರನ್ನು ಇಡಲಾಗುವುದು ಎಂದು ಉತ್ತರ ಪ್ರದೇಶ ಸರ್ಕಾರ ಸೋಮವಾರ ಘೋಷಿಸಿದೆ.
ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯುಡಿ) ಇದಕ್ಕಾಗಿ ಪ್ರಸ್ತಾವನೆಯನ್ನು ಸಿದ್ಧಪಡಿಸಲಿದ್ದು, ಅಯೋಧ್ಯೆ, ಲಕ್ನೋ, ಅಲಿಗಡ, ಇಟಾಹ್, ಬುಲಂದ್ ಶಹರ್ ಮತ್ತು ಪ್ರಯಾಗರಾಜ್ ನಲ್ಲಿ ತಲಾ ಒಂದು ಪಿಡಬ್ಲ್ಯೂಡಿ ಮುಖ್ಯ ರಸ್ತೆಗೆ ಕಲ್ಯಾಣ್ ಸಿಂಗ್ ಹೆಸರಿಡಲಾಗುವುದು ಎಂದು ಉಪಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಹೇಳಿದರು. ಪಿಡಬ್ಲ್ಯುಡಿ ಅಧಿಕಾರಿಗಳು ಶೀಘ್ರದಲ್ಲೇ ಈ ಕುರಿತು ಪ್ರಸ್ತಾವನೆ ಕಳುಹಿಸುತ್ತಾರೆ ಎಂದು ಅವರು ಹೇಳಿದರು.
ಆರು ಜಿಲ್ಲೆಗಳ ರಸ್ತೆಗೆ ದಿವಂಗತ ಕಲ್ಯಾಣ್ ಸಿಂಗ್ ಹೆಸರನ್ನು ಇಡಲು ನಿರ್ಧರಿಸಿದ ಯೋಗಿ ಸರ್ಕಾರ - 1 min read
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.