ಮೀರತ್(ಡಿ. 9) : ಮದುವೆಯಾಗು ಎಂದಿದ್ದಕ್ಕೆ ಪ್ರೇಯಸಿಯನ್ನೇ ಕೊಲೆ ಮಾಡಿ ಗಂಗಾ ನದಿಗೆ ಎಸೆದ ಘಟನೆ ಉತ್ತರಪ್ರದೇಶದ ಮೀರತ್‌ನಲ್ಲಿ ನಡೆದಿದೆ. ಕಾಂಚನಾ ಶರ್ಮಾ ಕೊಲೆಯಾದ ಯುವತಿ. ಈಕೆ ಹಸ್ತಿನಾಪುರಕ್ಕೆ ಕಂಪ್ಯೂಟರ್ ಕೋಚಿಂಗ್ ಕ್ಲಾಸ್‌ಗೆ ಬರುತ್ತಿದ್ದಳು.
ಕೊಲೆ ಮಾಡಿದ ಯುವಕನನ್ನು ರೋಹಿತ್ ಎಂದು ಗುರುತಿಸಲಾಗಿದೆ. ಈತನ ಸ್ನೇಹಿತರಾದ ಸೌರಭ್ ಹಾಗೂ ರಾಹುಲ್ ಎಂಬುವವರು ಕೂಡ ರಾಹುಲ್‌ಗೆ ಆತನ ಪ್ರೇಯಸಿಯ ಕೊಲೆ ಮಾಡಲು ಸಹಕರಿಸಿದ್ದಾರೆ. ನಂತರ ಗಂಗಾ ನದಿಗೆ ಶವವನ್ನು ಎಸೆದಿದ್ದಾರೆ. ಯುವತಿಯ ಕೊಲೆ ಮಾಡಿರುವುದಾಗಿ ಈ ಮೂವರು ಯುವತಿಯನ್ನು ಕೊಲೆ ಮಾಡಿ ನದಿಗೆ ಎಸೆದಿದ್ದಾಗಿ ಒಪ್ಪಿಕೊಂಡಿದ್ದಾರೆ. ನಂತರ ಯುವತಿಯ ಶವಕ್ಕಾಗಿ ಪೊಲೀಸರು ಹಾಗೂ ಮುಳುಗುತಜ್ಞರು ಹಸ್ತಿನಾಪುರದ ಗಂಗಾ ನದಿಯ ಭೀಮ್‌ಕುಂಡದಲ್ಲಿ ಶೋಧ ನಡೆಸಿದ್ದಾರೆ.
ಆರೋಪಿ ಯುವತಿಯ ಕೊಲೆ ಮಾಡಿದ ಬಳಿಕ ಗುರುತು ಸಿಗದಿರಲು ದೇಹವನ್ನು ಸುಟ್ಟಿದ್ದಾನೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿದ್ದವು. 22 ವರ್ಷದ ಕಾಂಚನಾ ಶರ್ಮಾ, ಹಸ್ತಿನಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಸಾಯಿಪುರ ಗ್ರಾಮದ ನಿವಾಸಿ. ಈಕೆ ಡಿಸೆಂಬರ್ 6ರಿಂದ ಕಾಣೆಯಾಗಿದ್ದಳು. ಈ ಹಿನ್ನೆಲೆಯಲ್ಲಿ ಯುವತಿಯ ತಂದೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ನಂತರ ಪ್ರಾವಿಷನ್ ಸ್ಟೋರ್ ಮಾಲೀಕನಾದ ರೋಹಿತ್ ಹಾಗೂ ಆತನ ಇಬ್ಬರು ಗೆಳೆಯರನ್ನು ಪೊಲೀಸರು ಬಂಧಿಸಿದ್ದರು.
ಪೊಲೀಸ್ ಮೂಲಗಳ ಪ್ರಕಾರ ಕಾಂಚನಾ, ರೋಹಿತ್‌ಗೆ ಮದುವೆಯಾಗುವಂತೆ ಒತ್ತಾಯಿಸುತ್ತಿದ್ದಳು. ಇದರಿಂದ ಕೋಪಗೊಂಡಿದ್ದ ಆತ ತನ್ನ ಸ್ನೇಹಿತರೊಡಗೂಡಿ ಆಕೆಯ ಕೊಲೆ ಮಾಡಲು ನಿರ್ಧರಿಸಿದ್ದ. ಕೇವಲ ಮೂರು ತಿಂಗಳ ಹಿಂದಷ್ಟೇ ಕಾಂಚನಾಗೆ ರೋಹಿತ್ ಪರಿಚಯವಾಗಿ ನಂತರ ಇಬ್ಬರ ಮಧ್ಯೆ ಪ್ರೀತಿಯಾಗಿತ್ತು. ಕಾಂಚನಾ ರೋಹಿತ್‌ಗೆ 25,000 ರೂ ಹಣವನ್ನು ಶಾಪಿಂಗ್‌ಗಾಗಿ ಖರ್ಚು ಮಾಡಿದ್ದಳು. ಬಿಎ ಪದವಿ ಓದುತ್ತಿದ್ದ ಕಾಂಚನಾ ಅದರ ಜೊತೆಗೆ ಹಸ್ತಿನಾಪುರದಲ್ಲಿ ಕಂಪ್ಯೂಟರ್ ಕೋಚಿಂಗ್ ಕೂಡ ಪಡೆಯುತ್ತಿದ್ದಳು.
ತನ್ನನ್ನು ಮದುವೆಯಾಗುವಂತೆ ಸದಾ ಕೇಳುತ್ತಿದ್ದ ಕಾಂಚನಾ ಬುಧವಾರ ರೋಹಿತ್‌ಗೆ ಕರೆ ಮಾಡಿ, ತಾನು ನೀನಿರುವಲ್ಲಿಗೆ ಬರುತ್ತಿದ್ದು, ನೀನು ನನ್ನನ್ನು ಮದುವೆಯಾಗಬೇಕು ಎಂದು ಕೇಳಿದ್ದಾಳೆ. ನಂತರ ಅಲ್ಲಿಗೆ ಆಕೆ ಬರುತ್ತಿದ್ದಂತೆ ಆಕೆಯನ್ನು ಕಾರಿನಲ್ಲಿ ಕಾಡೊಂದಕ್ಕೆ ಕರೆದೊಯ್ದ ಆತ ಅಲ್ಲಿ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಆರೋಪಿಗಳನ್ನು ಕೋರ್ಟ್‌ಗೆ ಹಸ್ತಾಂತರಿಸಲಾಗಿದೆ. ಆರೋಪಿಗಳ ವಿರುದ್ಧ ಪ್ರಸ್ತುತ ಕಿಡ್ನಾಪ್ ಕೇಸ್ ಹಾಕಲಾಗಿದ್ದು, ಹುಡುಗಿಯ ಮೃತದೇಹ ಸಿಕ್ಕ ನಂತರ ಕೊಲೆ ಪ್ರಕರಣ ದಾಖಲಿಸುತ್ತೇವೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಕೇಶವ್ ಕುಮಾರ್ ಹೇಳಿದ್ದಾರೆ.
ಕೆಲ ದಿನಗಳ ಹಿಂದೆ ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿ ಪ್ರೇಮ ವಿವಾಹವಾಗಿದ್ದಕ್ಕೆ 19 ವರ್ಷದ ಯುವತಿಯನ್ನು ಆಕೆಯ ಸಹೋದರ ಹಾಗೂ ತಾಯಿ ಇಬ್ಬರು ಸೇರಿ ಕೊಲೆ ಮಾಡಿದ್ದರು. ಕೆಲ ತಿಂಗಳ ಹಿಂದೆ ಈಕೆ ತಾನು ಪ್ರೀತಿಸುತ್ತಿದ್ದ ಯುವಕನೊಂದಿಗೆ ಓಡಿ ಹೋಗಿ ಮದುವೆಯಾಗಿದ್ದಳು. ಇದರಿಂದ ಆಕ್ರೋಶಗೊಂಡ ಆಕೆಯ ಅಮ್ಮ ಹಾಗೂ 17 ವರ್ಷದ ಸಹೋದರ ಆಕೆಯನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದರು. ಅಷ್ಟೇ ಅಲ್ಲದೇ ಮಗಳ ತಲೆಯೊಂದಿಗೆ ಅಮ್ಮನ್ನು ಮಗನೂ ಸೆಲ್ಪಿ ತೆಗೆದಿದ್ದರು. ಡಿಸೆಂಬರ್ 5ರಂದು ಪ್ರಕರಣ ಬೆಳಕಿಗೆ ಬಂದಿತ್ತು. ಓಡಿ ಹೋಗಿದ್ದ ಮಗಳನ್ನು ಇತ್ತೀಚೆಗೆ ಸಂಪರ್ಕಿಸಿದ ತಾಯಿ ತಾವು ನಿಮ್ಮ ಮನೆಗೆ ಬರುವುದಾಗಿ ಹೇಳಿದ್ದಳು. ನಂತರ ವಾರದಲ್ಲಿ ಅಮ್ಮ ಮಗ ಮನೆಗೆ ಬಂದಿದ್ದರು. ಈ ವೇಳೆ ಅವರಿಗೆ ನೀರು ನೀಡಿ ಇನ್ನೇನು ಚಹಾ ಮಾಡಬೇಕು ಎಂದು ಅಡಿಗೆ ಮನೆಯಲ್ಲಿ ಸಿದ್ಧತೆ ನಡೆಸುತ್ತಿದ್ದಾಗ ಹಿಂದಿನ ಹೋದ ಯುವತಿಯ ಸಹೋದರ ಆಕೆಯ ಕುತ್ತಿಗೆಗೆ ಮಚ್ಚಿನಿಂದ ಕಡೆದು ತಲೆ ತುಂಡರಿಸಿದ್ದ. ಘಟನೆಯ ಬಳಿಕ ತಾಯಿ ಮಗನನ್ನು ಬಂಧಿಸಲಾಗಿದೆ.