ಉತ್ತರಪ್ರದೇಶ: ನೋಯ್ಡಾದಲ್ಲಿ ಮಂಕಿಪಾಕ್ಸ್ನ ಶಂಕಿತ ಪ್ರಕರಣ ವರದಿಯಾಗಿದ್ದು, ಈ ಮೂಲಕ ದೇಶದಲ್ಲಿ ಮತ್ತಷ್ಟು ಆತಂಕ ಹೆಚ್ಚಿದೆ. 47 ವರ್ಷದ ಮಹಿಳಾ ರೋಗಿಯು ನಿನ್ನೆ ಆರೋಗ್ಯ ಇಲಾಖೆಯನ್ನು ಸಂಪರ್ಕಿಸಿದ್ದು, ಅವರ ಮಾದರಿಯನ್ನು ಲಕ್ನೋಗೆ ಪರೀಕ್ಷೆಗಾಗಿ ಕಳುಹಿಸಲಾಗಿದೆ. ರೋಗಿ ಮನೆಯಲ್ಲಿ ಪ್ರತ್ಯೇಕವಾಗಿದ್ದಾರೆ.
ಪರೀಕ್ಷಾ ವರದಿಯ ಫಲಿತಾಂಶ ಹೊರಬಂದ ನಂತರವೇ ಮಂಕಿಪಾಕ್ಸ್ ಅನ್ನು ದೃಢಪಡಿಸಲಾಗುವುದು. ಇದುವರೆಗೂ ಮಹಿಳೆಯ ಪ್ರಯಾಣದ ಈಸ್ಟರಿ ದೃಢಪಟ್ಟಿಲ್ಲ ಎಂದು ಸ್ಥಳೀಯ ಆರೋಗ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಭಾರತವು ಮಂಕಿಪಾಕ್ಸ್ ಅನ್ನು ಪತ್ತೆಹಚ್ಚಲು 15 ಪ್ರಯೋಗಾಲಯಗಳನ್ನು ಗೊತ್ತುಪಡಿಸಿದ್ದು, ಎರಡು ಹಂತದ ಆರ್ಟಿ- ಪಿಸಿಆರ್ (RTPCR)ಪರೀಕ್ಷೆಗಳನ್ನು ಕೈಗೊಳ್ಳಲು ಸಾಕಷ್ಟು ಸಾಧನಗಳನ್ನು ಹೊಂದಿದೆ ಎನ್ನಲಾಗುತ್ತಿದೆ.
ಇಲ್ಲಿಯವರೆಗೆ, ಭಾರತದಲ್ಲಿ ಮಂಕಿಪಾಕ್ಸ್ ಸೋಂಕಿನ 6 ಪ್ರಕರಣಗಳನ್ನು ವರದಿಯಾಗಿವೆ. ಕೇರಳದಲ್ಲಿ ಮೂರು ಮತ್ತು ದೆಹಲಿಯಲ್ಲಿ ಒಂದು ಕೇಸ್ ದೃಢಪಟ್ಟಿದೆ.