News Kannada
Saturday, December 10 2022

ವಿದೇಶ

ಇನ್ನು ಕೆಲ ವರ್ಷಗಳಲ್ಲಿ ಕರೋನಾ ಮಕ್ಕಳ ರೋಗವಾಗಬಹುದು

coivd 19
Photo Credit :

ವಾಷಿಂಗ್ಟನ್‌ : ಇನ್ನು ಕೆಲ ವರ್ಷಗಳಲ್ಲಿ ಕೋವಿಡ್‌-19 ವೈರಸ್‌ ಕೂಡ ಇನ್ನಿತರ ಸಾಮಾನ್ಯ ನೆಗಡಿಕಾರಕ ವೈರಸ್‌ನಂತಾಗಬಹುದು. ಅದರಲ್ಲೂ ವಿಶೇಷವಾಗಿ ಇದು ಮಕ್ಕಳನ್ನು ಮಾತ್ರ ಬಾಧಿಸುವ ವೈರಸ್‌ ಆಗಬಹುದು ಎಂದು ಅಧ್ಯಯನವೊಂದು ಹೇಳಿದೆ.

ಅಮೆರಿಕ ಮತ್ತು ನಾರ್ವೆ ವಿಜ್ಞಾನಿಗಳ ತಂಡವೊಂದು ಈ ಕುರಿತು ಅಧ್ಯಯನ ನಡೆಸಿದ್ದು, ಅದರಲ್ಲಿ ಕೋವಿಡ್‌-19 (ಸಾರ್ಸ್‌-ಕೋವ್‌-2) ವೈರಸ್‌ ಇನ್ನು ಕೆಲ ವರ್ಷಗಳಲ್ಲಿ ಜಾಗತಿಕವಾಗಿ ‘ಸ್ಥಳೀಯ ಸಾಂಕ್ರಾಮಿಕ ವೈರಸ್‌’ ಆಗಲಿದೆ. ಅಂದರೆ ಸ್ಥಳೀಯವಾಗಿ ಮಾತ್ರ ಇದು ಹರಡಲಿದೆ. ಈಗ ಇದು ವಯಸ್ಸಾದವರ ಮೇಲೇ ಹೆಚ್ಚು ಪರಿಣಾಮ ಉಂಟುಮಾಡುತ್ತಿದ್ದರೂ ಇನ್ನು ಕೆಲ ವರ್ಷಗಳಲ್ಲಿ ಲಸಿಕೆಯಿಂದಾಗಿ ಅಥವಾ ನೈಸರ್ಗಿಕವಾಗಿ ಜಗತ್ತಿನ ಎಲ್ಲ ಹಿರಿಯರಿಗೂ ಈ ವೈರಸ್‌ ವಿರುದ್ಧ ರೋಗನಿರೋಧಕ ಶಕ್ತಿ ಲಭಿಸಲಿದೆ. ಆಗ ಇದು ಲಸಿಕೆ ಪಡೆಯದ ಮಕ್ಕಳಲ್ಲಿ ಮಾತ್ರ ಸಣ್ಣ ಪ್ರಮಾಣದ ನೆಗಡಿ ಉಂಟುಮಾಡುವ ಸಾಮಾನ್ಯ ವೈರಸ್‌ ಆಗಿ ಪರಿಣಮಿಸಲಿದೆ ಎಂದು ತಿಳಿದುಬಂದಿದೆ.

ಉದಾಹರಣೆಗೆ, 1889-1890ರ ಸಮಯದಲ್ಲಿ ಏಷಿಯಾಟಿಕ್‌ ವೈರಸ್‌ ಜಗತ್ತಿನಾದ್ಯಂತ 10 ಲಕ್ಷಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿತ್ತು. 70 ವರ್ಷ ಮೇಲ್ಪಟ್ಟವರೇ ಹೆಚ್ಚಾಗಿ ಸಾವನ್ನಪ್ಪಿದ್ದರು. ಆದರೆ, ಈಗ 7ರಿಂದ 12 ತಿಂಗಳ ನಡುವಿನ ಮಕ್ಕಳಿಗಷ್ಟೇ ಈ ವೈರಸ್‌ನಿಂದ ನೆಗಡಿಯಾಗುತ್ತದೆ. ಹೆಚ್ಚಿನ ಕೊರೋನಾ ವೈರಸ್‌ಗಳೆಲ್ಲ ಹೀಗೇ ವರ್ತಿಸುತ್ತವೆ ಎಂದು ಅಧ್ಯಯನದ ವರದಿಯಲ್ಲಿ ತಿಳಿಸಲಾಗಿದೆ.

See also  ತಾಂತ್ರಿಕ ಸಲಹಾ ಸಮಿತಿ ಒಪ್ಪಿಗೆ ಕೊಟ್ಟರೆ ಶಾಲೆ ಆರಂಭ ಮಾಡುತ್ತೇವೆ: ಸಚಿವ ಬಿ.ಸಿ.ನಾಗೇಶ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

44
News Kannada

The most exciting, trusted and preferred news websites of Karnataka and Kannadigas around the world.

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು