ಯೆಮೆನ್ ನಲ್ಲಿ ಯುದ್ಧದಲ್ಲಿ ನಿರತರಾಗಿರುವಾಗ ಸೌದಿ ಅರೇಬಿಯಾದಲ್ಲಿ ಈ ಘಟನೆ ನಡೆದಿದೆ. ದಾಳಿಗೆ ತಕ್ಷಣಕ್ಕೆ ಯಾವುದೇ ಸಂಘಟನೆಗಳು ಹೊಣೆ ಹೊತ್ತಿಲ್ಲ. 24 ಗಂಟೆಗಳಲ್ಲಿ ಸಂಭವಿಸಿದ ಎರಡನೇ ದಾಳಿ ಇದಾಗಿದೆ.
ಈ ಹಿಂದಿನ ದಾಳಿಯಲ್ಲಿ ಸಾವು-ನೋವುಗಳು ಸಂಭವಿಸಿರಲಿಲ್ಲ. ಸೌದಿ ನೇತೃತ್ವದ ಮಿಲಿಟರಿ ಪಡೆ ಇರಾನ್ ಬೆಂಬಲಿತ ಶಿಯಾ ಬಂಡಾಯದವರ ವಿರುದ್ಧ ಯೆಮೆನ್ ನಲ್ಲಿ ಯುದ್ಧದಲ್ಲಿ ಕೈ ಜೋಡಿಸಿದೆ. ತಕ್ಷಣಕ್ಕೆ ಸರ್ಕಾರದಿಂದ ಡ್ರೋನ್ ದಾಳಿ ಬಗ್ಗೆ ಯಾವುದೇ ಪ್ರತಿಕ್ರಿಯೆಯೂ ದೊರೆತಿಲ್ಲ.
2015 ರಿಂದಲೂ ಯೆಮೆನ್ ನ ಹೌತಿ ಬಂಡಾಯದವರು ಸೌದಿ ವಿರುದ್ಧ ಯುದ್ಧದಲ್ಲಿ ತೊಡಗಿದ್ದು ಹಲವು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳು ಸೇನಾ ನೆಲೆಗಳನ್ನು ಟಾರ್ಗೆಟ್ ಮಾಡುತ್ತಿವೆ.