ಶಾಂಘೈ: ಈ ಚಳಿಗಾಲದಲ್ಲಿ ‘ಟ್ವಿಂಡೆಮಿಕ್’ ಖಾಯಿಲೆಯ ಸಂಭಾವ್ಯತೆಯ ಹೆಚ್ಚಳದ ಬಗ್ಗೆ ಎಚ್ಚರಿಕೆಯನ್ನು ಚೀನಾದ ಆರೋಗ್ಯ ಅಧಿಕಾರಿಗಳು ಜನತೆ ನೀಡಿದ್ದಾರೆ. ಸೆಪ್ಟೆಂಬರ್ ನಿಂದ ದೇಶದ ದಕ್ಷಿಣ ಪ್ರಾಂತ್ಯಗಳಲ್ಲಿ ಜ್ವರ ಹೆಚ್ಚಾಗಿರುವ ಹಿನ್ನಲೆಯಲ್ಲಿ, ಇನ್ಫ್ಲುಯೆನ್ಸ ತಡೆಗಟ್ಟುವಿಕೆಯ ಅಗತ್ಯವನ್ನು ಕೂಡ ಜನತೆ ತಿಳಿಸಿದ್ದಾರೆ. ಶುಕ್ರವಾರ ಹೊರಡಿಸಿದ ಅಧಿಸೂಚನೆಯಲ್ಲಿ, ಚೀನಾದ ಆರೋಗ್ಯ ಇಲಾಖೆಯು ಫ್ಲೂ ಸಮಯದಲ್ಲಿ ಇನ್ಫ್ಲುಯೆನ್ಸ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕ್ರಮಗಳನ್ನು ಹೆಚ್ಚಿನಮಟ್ಟದಲ್ಲಿ ತಡೆಗಟ್ಟಲು ಮುಂದಾಗಬೇಕ ಅಂತ ಹೇಳಿದೆ. ತಜ್ಞರು ಫ್ಲೂ ಮತ್ತು ಕರೋನಗಳೆರಡನ್ನೂ ಒಟ್ಟಿಗೆ ಸೇರಿಸಿ ‘ಟ್ವಿಂಡೆಮಿಕ್’ ಎಂದು ಕರೆದಿದ್ದಾರೆ.
ಚೀನಾದ ಆರೋಗ್ಯ ಅಧಿಕಾರಿಗಳು ಮಾರ್ಚ್ ನಿಂದ ದೇಶದ ದಕ್ಷಿಣ ಮತ್ತು ಉತ್ತರ ಭಾಗಗಳಲ್ಲಿ ಈ ಸಾಂಕ್ರಾಮಿಕ ಖಾಯಿಲೆ ಕಳೆದ ವರ್ಷಕ್ಕಿಂತ ಈಗ ಹೆಚ್ಚಾಗಿದೆ ಎಂದು ಹೇಳಿದ್ದಾರೆ. ಈ ರೋಗದಿಂದ ಬಚಾವ್ ಆಗುವ ಸಲುವಾಗಿ ನೋಡಿ ಮಾಹಿತಿಚಳಿಗಾಲದ ಮುಂಚಿತವಾಗಿ, ಚೀನಾದ ಅಧಿಕಾರಿಗಳು ಮೇಲ್ವಿಚಾರಣೆ ಮತ್ತು ಮುಂಚಿನ ಎಚ್ಚರಿಕೆಯ ಕಾರ್ಯವಿಧಾನಗಳನ್ನು ಬಲಪಡಿಸಲು, ಪ್ರಮುಖ ಗುಂಪುಗಳಿಗೆ ರೋಗನಿರೋಧಕತೆಯನ್ನು ನೀಡುವುದು, ಬಹು-ರೋಗ ತಡೆಗಟ್ಟುವಿಕೆಯನ್ನು ಉತ್ತೇಜಿಸುವುದು, ಸಾಂಕ್ರಾಮಿಕ ಚಿಕಿತ್ಸೆಯನ್ನು ಪ್ರಮಾಣೀಕರಿಸುವುದು ಮತ್ತು ವ್ಯಾಪಕ ಪ್ರಚಾರ ಮತ್ತು ಸಜ್ಜುಗೊಳಿಸುವಿಕೆಗೆ ಕರೆ ನೀಡಿದ್ದಾರೆ.