News Kannada
Tuesday, March 28 2023

ವಿದೇಶ

ಹೊಸ ಉಪಗ್ರಹ ಉಡಾವಣೆಯಲ್ಲಿ ಯಶಸ್ವಿಯಾದ ಚೀನಾ

Photo Credit :

ಬೀಜಿಂಗ್: ಪರೀಕ್ಷೆ ಉದ್ದೇಶದ ಹೊಸ ಉಪಗ್ರಹವೊಂದನ್ನು ಚೀನಾ ಯಶಸ್ವಿಯಾಗಿ ಗುರುವಾರ ಉಡಾವಣೆ ಮಾಡಿತು ಎಂದು ಸರ್ಕಾರಿ ಒಡೆತನದ ಮಾಧ್ಯಮವೊಂದು ವರದಿ ಮಾಡಿದೆ.

‘ಶಿಯಾನ್‌-11’ ಎಂಬ ಉಪಗ್ರಹವನ್ನು ಹೊತ್ತ ‘ಕುವಾಯಿಜೌ-1ಎ’ ರಾಕೆಟ್‌ ನಭಕ್ಕೆ ಚಿಮ್ಮಿ, ಪೂರ್ವನಿರ್ಧರಿತ ಭೂಕಕ್ಷೆಯಲ್ಲಿ ಅದನ್ನು ಸೇರಿಸಿತು.

ಮಂಗೋಲಿಯಾದ ಗೋಬಿ ಮರುಭೂಮಿಯಲ್ಲಿರುವ ಜಿಯುಕ್ವಾನ್‌ ಉಪಗ್ರಹ ಉಡಾವಣೆ ಕೇಂದ್ರದಲ್ಲಿ ಈ ಕಾರ್ಯ ನೆರವೇರಿತು ಎಂದು ಚೀನಾ ಗ್ಲೋಬಲ್ ಟೆಲಿವಿಷನ್ ನೆಟ್‌ವರ್ಕ್‌ (ಸಿಜಿಟಿಎನ್‌) ವರದಿ ಮಾಡಿದೆ.

‘ಪರೀಕ್ಷೆ ಉದ್ದೇಶಕ್ಕಾಗಿ ಈ ಉಪಗ್ರಹವನ್ನು ಅಭಿವೃದ್ಧಿಪಡಿಸಲಾಗಿದೆ ಎಂದಷ್ಟೆ ಮಾಹಿತಿ ಇದ್ದು, ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಿಲ್ಲ’ ಎಂದು ಸಿಜಿಟಿಎನ್‌ ಹೇಳಿದೆ.

ಇದೇ ಸರಣಿಯ ಶಿಯಾನ್‌-10 ಉಪಗ್ರಹವನ್ನು ಕೆಲ ದಿನಗಳ ಹಿಂದೆ ಉಡಾವಣೆ ಮಾಡಲಾಗಿತ್ತು. ಯಶಸ್ವಿಯಾಗಿ ನಿರ್ದಿಷ್ಟ ಕಕ್ಷೆಗೆ ಸೇರಿಸಲಾಗಿದ್ದರೂ, ತನ್ನ ನಿಗದಿತ ಕಾರ್ಯ ಮಾಡುವಲ್ಲಿ ವಿಫಲವಾಗಿತ್ತು.

See also  ತಾಲಿಬಾನ್ ದೊಡ್ಡ ನಿರ್ಧಾರ ತೆಗೆದುಕೊಳ್ಳುತ್ತಿದ್ದಂತೆ ಬಾಲಕಿಯರ ಶಿಕ್ಷಣಕ್ಕೆ ಪೆಟ್ಟು - ಅಫ್ಘಾನಿಸ್ತಾನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು