News Kannada
Monday, March 27 2023

ವಿದೇಶ

ಕೇರಳ ಮೂಲದ ಯುವತಿಯನ್ನು ಅಮೆರಿಕದ ಅಲಬಾಮಾದಲ್ಲಿ ಗುಂಡಿಕ್ಕಿ ಕೊಲೆ

Photo Credit :

ಕೇರಳ ಮೂಲದ 19 ವರ್ಷದ ಯುವತಿಯನ್ನು ಅಮೆರಿಕದ ಅಲಬಾಮಾ ಎಂಬಲ್ಲಿ ಗುಂಡಿಕ್ಕಿ ಕೊಲೆಗೈಯಲಾಗಿದೆ. ಮೃತ ಯುವತಿಯನ್ನು ಮರಿಯಂ ಸುಸಾನ್​ ಮ್ಯಾಥ್ಯೂ ಎಂದು ಗುರುತಿಸಲಾಗಿದೆ. ಈಕೆ ತಿರುವಲ್ಲಾ ಮೂಲದವರು ಎಂದು ತಿಳಿದುಬಂದಿದೆ. ಮರಿಯಂ ತನ್ನ ನಿವಾಸದಲ್ಲಿ ಮಲಗಿದ್ದ ವೇಳೆ ಮೇಲಿನ ಮಹಡಿಯಿಂದ ಬಂದ ಗುಂಡುಗಳು ಸೀಲಿಂಗ್​ ತೂರಿಕೊಂಡು ಯುವತಿಗೆ ನಾಟಿದೆ ಎಂದು ತಿಳಿದುಬಂದಿದೆ.

ಅಲಬಮಾದ ಮಾಂಟ್ಗೋಮೆರಿಯಲ್ಲಿ ಈ ಘಟನೆಯು ನಡೆದಿದೆ. ಈ ಪ್ರಕರಣ ಸಂಬಂಧ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಸೌತ್​ ವೆಸ್ಟ್​​ ಅಮೆರಿಕ ಮಲಂಕರ ಆರ್ಥೋಡಾಕ್ಸ್​​ ಚರ್ಚ್​ ಡಯಾಸಿಸ್​ನ ಫಾದರ್​ ಜಾನ್ಸನ್​ ಪಪ್ಪಚನ್​​ ಈ ಸಂಬಂಧ ಪ್ರಕಟಣೆ ಹೊರಡಿಸಿದ್ದು, ಸೂಸನ್​ ಮ್ಯಾಥ್ಯೂ ಮನೆಯ ಮೇಲಿನ ಮಹಡಿಯಲ್ಲಿ ವಾಸಿಸುತ್ತಿದ್ದು, ಬಂದೂಕಿನಿಂದ ಗುಂಡು ಹಾರಿಸಿದ್ದಾರೆ. ಈ ಗುಂಡು ಸುಸನ್​​ಗೆ ತಗುಲಿದ ಪರಿಣಾಮ ಅವರು ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ. ಫೈರಿಂಗ್​​ ಆದ ತಕ್ಷಣವೇ ಸುಸನ್​ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಅಂದಹಾಗೆ ಕಳೆದ 7 ದಿನಗಳಲ್ಲಿ ಮಾಂಟ್ಗೊಮೆರಿಯಲ್ಲಿ ನಡೆದ 2ನೇ ಗುಂಡಿನ ದಾಳಿ ಇದಾಗಿದೆ. ಇದಕ್ಕೂ ಮೊದಲು ಗುರುವಾರ ವ್ಯಕ್ತಿಯೊಬ್ಬನನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು.

ಡಲ್ಲಾಸ್​ ಎಂಬಲ್ಲಿ ದರೋಡೆಕೋರರ ಗುಂಡಿನ ದಾಳಿಗೆ ಮತ್ತೊಬ್ಬ ಕೇರಳಿಗ ಬಲಿಯಾಗಿದ್ದಾನೆ. ಡಲ್ಲಾಸ್​ನಲ್ಲಿ ಸೌಂದರ್ಯವರ್ಧಕಗಳ ಅಂಗಡಿ ಹೊಂದಿದ್ದ ಸಜನ್​ ಮ್ಯಾಥ್ಯೂಸ್​​ ಕೊಲೆಯಾದ ಕೇರಳಿಗ ವ್ಯಕ್ತಿ. ಇವರ ಅಂಗಡಿಗೆ ನುಗ್ಗಿದ ದರೋಡೆಕೋರ ಮ್ಯಾಥ್ಯೂಸ್​ ಮೇಲೆ ಗುಂಡು ಹಾರಿಸಿದ್ದಾರೆ.

See also  ರಷ್ಯಾ-ಉಕ್ರೇನ್ ಯುದ್ಧದಲ್ಲಿ ಚೆರ್ನೋಬಿಲ್ ಪರಮಾಣು ಸ್ಥಾವರವನ್ನು ವಶಪಡಿಸಿಕೊಂಡ ರಷ್ಯಾ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು