News Kannada
Tuesday, January 31 2023

ವಿದೇಶ

ಫಿಲಿಪ್ಪೀನ್ಸ್‌ನಲ್ಲಿ ಚಂಡಮಾರುತ: ಸಾವಿನ ಸಂಖ್ಯೆ 208ಕ್ಕೆ ಏರಿಕೆ

Karwar: Make community health officers permanent as per central government guidelines
Photo Credit :

ಮನಿಲಾ : ಫಿಲಿಪ್ಪೀನ್ಸ್‌ನಲ್ಲಿ ರೈ ಚಂಡಮಾರುತದ ಪರಿಣಾಮ ಮೃತಪಟ್ಟವರ ಸಂಖ್ಯೆ 208ಕ್ಕೆ ಏರಿದ್ದು, ಇನ್ನೂ 52 ಮಂದಿ ನಾಪತ್ತೆಯಾಗಿದ್ದಾರೆ.

ವಿವಿಧ ಪಟ್ಟಣಗಳಲ್ಲಿ ವಿದ್ಯುತ್ ಪೂರೈಕೆ ವ್ಯತ್ಯಯಗೊಂಡಿದ್ದು, ಸಂಪರ್ಕ ಮತ್ತು ಸಂವಹನ ಕಡಿತವಾಗಿದೆ. ನೀರು, ಆಹಾರ ಪೂರೈಸುವಂತೆ ಸಂತ್ರಸ್ತ ನಾಗರಿಕರು ಒತ್ತಾಯಿಸುತ್ತಿದ್ದಾರೆ.

ಚಂಡಮಾರುತದ ತೀವ್ರತೆ ಹೆಚ್ಚಿದ್ದು, ಗಂಟೆಗೆ 195 ಕಿ.ಮೀ. ವೇಗವಿತ್ತು. ದಕ್ಷಿಣ ಚೀನಾದ ಸಮುದ್ರದ ಭಾಗದಲ್ಲಿ ಕುಗ್ಗುವ ಮುನ್ನ ವೇಗ ಗಂಟೆಗೆ 270 ಕಿ.ಮೀವರೆಗೂ ಮುಟ್ಟಿತ್ತು.

239 ಜನರು ಗಾಯಗೊಂಡಿದ್ದಾರೆ. ವಿವಿಧ ಬಾಧಿತ ಪಟ್ಟಣಗಳಿಂದ ವರದಿ ಬರಬೇಕಿದೆ. ಸಾವಿನ ಸಂಖ್ಯೆ ಏರಬಹುದು ಎಂದು ಫಿಲಿಪ್ಪೀನ್ಸ್‌ ಪೊಲೀಸ್‌ನ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಮರಗಳು ಉರುಳಿ, ಗೋಡೆ ಕುಸಿದು ಹಲವರು ಮೃತಪಟ್ಟಿದ್ದಾರೆ. ಪ್ರವಾಹಕ್ಕೆ ಸಿಲುಕಿಯೂ ಕೆಲವರು ಸತ್ತಿದ್ದಾರೆ. ಚಂಡಮಾರುತದ ತೀವ್ರತೆ ಹೆಚ್ಚಿದ್ದು, ವ್ಯಕ್ತಿಯೊಬ್ಬರ ಶವ ಮರಕ್ಕೆ ಸಿಲುಕಿಕೊಂಡಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

See also  ಅಮೆರಿಕಾದ ಫಿಲಿಡೆಲ್ಫಿಯಾದಲ್ಲಿ ಮೂರು ಅಂತಸ್ತಿನ ಕಟ್ಟಡದಲ್ಲಿ ಅಗ್ನಿ ಅವಘಡ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12790
NewsKannada

Read More Articles
Editor's Pick

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು