News Kannada
Saturday, December 03 2022

ವಿದೇಶ

ಬ್ರೆಝಿಲ್‌: 1.37 ಲಕ್ಷ ಕೊರೋನ ವೈರಸ್ ಪ್ರಕರಣಗಳು ವರದಿ

Photo Credit : News Kannada

ರಿಯೊ ಡಿ ಜನೈರೊ: ಬ್ರೆಝಿಲ್‌ನಲ್ಲಿ ಇದುವರೆಗಿನ ಗರಿಷ್ಠ ಅಂದರೆ 1.37 ಲಕ್ಷ ಕೊರೋನ ವೈರಸ್ ಪ್ರಕರಣಗಳು ಮಂಗಳವಾರ ವರದಿಯಾಗಿವೆ ಎಂದು ಆರೋಗ್ಯ ಸಚಿವಾಲಯ ಪ್ರಕಟಿಸಿದೆ.ತೀವ್ರವಾಗಿ ಹಾಗೂ ಕ್ಷಿಪ್ರವಾಗಿ ಹರಡುವ ಒಮೈಕ್ರಾನ್ ಪ್ರಬೇಧ ಪತ್ತೆಯಾದ ಬಳಿಕ ಅಂದರೆ ಈ ವರ್ಷಾರಂಭದಿಂದ ಪ್ರಕರಣಗಳ ಸಂಖ್ಯೆ ಬ್ರೆಝಿಲ್‌ ನಲ್ಲಿ ಹೆಚ್ಚುತ್ತಲೇ ಇದೆ. ಕ್ರಿಸ್‌ಮಸ್ ಹಬ್ಬ ಮತ್ತು ಹೊಸ ವರ್ಷದ ಸಂಭ್ರಮಾಚರಣೆಗಳು ಇದಕ್ಕೆ ಮತ್ತಷ್ಟು ವೇಗ ನೀಡಿವೆ.

ಇಡೀ ವಿಶ್ವದಲ್ಲಿ ಅಮೆರಿಕ ಹೊರತುಪಡಿಸಿದರೆ ಗರಿಷ್ಠ ಸಾವು ಬ್ರೆಝಿಲ್‌ ನಲ್ಲಿ ಸಂಭವಿಸಿದ್ದು, ಇದುವರೆಗೆ 6.2 ಲಕ್ಷ ಮಂದಿ ಸೋಂಕಿತರು ಮೃತಪಟ್ಟಿದ್ದಾರೆ.

2021ರ ಕೊನೆಗೆ ದೇಶದಲ್ಲಿ ಹೊಸ ಕೋವಿಡ್-19 ಪ್ರಕರಣಗಳ ಸಂಖ್ಯೆ 8 ಸಾವಿರದ ಆಸುಪಾಸಿನಲ್ಲಿತ್ತು. ಬ್ರೆಝಿಲ್‌ನಲ್ಲಿ ಇದುವರೆಗೆ ಗರಿಷ್ಠ ಎಂದರೆ 2021ರ ಜೂನ್‌ನಲ್ಲಿ 1.15 ಲಕ್ಷ ಪ್ರಕರಣಗಳು ವರದಿಯಾಗಿದ್ದವು.

“ಇಷ್ಟಾಗಿಯೂ ದೇಶದಲ್ಲಿ ಸೋಂಕು ಇನ್ನೂ ಉತ್ತುಂಗ ತಲುಪಿಲ್ಲ. ಫೆಬ್ರುವರಿ ವೇಳೆಗೆ ಉತ್ತುಂಗಕ್ಕೇರಿ ಬಳಿಕ ಸ್ಥಿರವಾಗಲಿದೆ” ಎಂದು ಸಾಂಕ್ರಾಮಿಕ ರೋಗ ತಜ್ಞ ಎಥೆಲ್ ಮೈಕೆಲ್ ಹೇಳಿದ್ದಾರೆ.

213 ದಶಲಕ್ಷ ಜನಸಂಖ್ಯೆ ಹೊಂದಿರುವ ಈ ದಕ್ಷಿಣ ಅಮೆರಿಕನ್ ದೇಶ, ಜಾಗತಿಕ ಮಟ್ಟದಲ್ಲಿ ಕೋವಿಡ್‌ನಿಂದ ಅತ್ಯಂತ ಬಾಧಿತವಾಗಿರುವ ರಾಷ್ಟ್ರಗಳ ಪೈಕಿ ಒಂದಾಗಿದೆ.

ಹೆಚ್ಚುತ್ತಿರುವ ಪ್ರಕರಣಗಳು ಫೆಬ್ರುವರಿ ಕೊನೆಗೆ ನಡೆಯಲಿರುವ ಕಾರ್ನಿವಲ್ ಸಂಭ್ರಮದ ಮೇಲೂ ಪ್ರಭಾವ ಬೀರುವ ಸಾಧ್ಯತೆ ಇದೆ ಎನ್ನಲಾಗಿದೆ. ಸಿಯಾ ಪಾಲೊ, ರಿಯಾ ಡಿ ಜನೈರೊ ಮತ್ತು ಸಾಲ್ವಡೋರ್ ಈಗಾಗಲೇ ಕಾರ್ನಿವನ್ ನಡೆಸದಿರಲು ನಿರ್ಧರಿಸಿವೆ.

See also  ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕುಸಿತ: 2,706 ಜನರಲ್ಲಿ ಹೊಸದಾಗಿ ಸೋಂಕು ಪತ್ತೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

12795
NewsKannada

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು