News Kannada
Tuesday, November 29 2022

ವಿದೇಶ

ಸ್ಪೋಟಕ ಸಾಗಿಸುತ್ತಿದ್ದ ಟ್ರಕ್ ಗೆ ಬೈಕ್ ಡಿಕ್ಕಿ ಹೊಡೆದು ಘೋರ ದುರಂತ, ಕನಿಷ್ಠ 50 ಮಂದಿ ಸಾವು - 1 min read

Photo Credit :

  ಘಾನಾ: ಘಾನಾದಲ್ಲಿ ಗುರುವಾರ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ 50 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.ನೈಋತ್ಯ ಘಾನಾದ ಅಪಿಯೇಟ್ ಎಂಬ ಸಣ್ಣ ಪಟ್ಟಣದಲ್ಲಿ ಘಟನೆ ನಡೆದಿದೆ. ನಿಖರವಾದ ಸಾವಿನ ಸಂಖ್ಯೆ ಇನ್ನೂ ತಿಳಿದಿಲ್ಲ. ಘಾನಾದ ಪೊಲೀಸ್ ಸೇವೆ ವಿಭಾಗದಿಂದ ತನಿಖೆ ನಡೆಯುತ್ತಿವೆ. ಗಾಯಾಳುಗಳಿಗೆ ಆಸ್ಪತ್ರೆ, ಚರ್ಚ್ ಗಳಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಸ್ಫೋಟಕಗಳನ್ನು ಸಾಗಿಸುತ್ತಿದ್ದ ಗಣಿಗಾರಿಕೆ ಟ್ರಕ್ ಮೋಟಾರ್‌ ಸೈಕಲ್‌ಗೆ ಡಿಕ್ಕಿ ಹೊಡೆದು ಸ್ಫೋಟ ಸಂಭವಿಸಿದ್ದು, ಸುತ್ತಮುತ್ತಲಿನ ಕಟ್ಟಡಗಳೆಲ್ಲ ನೆಲಸಮವಾಗಿವೆ.ಸಂತ್ರಸ್ಥರಿಗೆ ನೆರವಾಗಲು ಚರ್ಚ್‌ಗಳು, ಹತ್ತಿರದ ಪಟ್ಟಣಗಳ ನಿವಾಸಿಗಳಿಗೆ ಮನವಿ ಮಾಡಲಾಗಿದೆ.

ಟ್ರಕ್ ತರ್ಕ್ವಾ ಮತ್ತು ಚಿರಾನೊದ ಚಿನ್ನದ ಗಣಿಗಳ ನಡುವೆ ಚಲಿಸುತ್ತಿತ್ತು ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ, ಹೆಚ್ಚಿನ ಗಾಯಾಳುಗಳನ್ನು ಹತ್ತಿರದ ಪಟ್ಟಣವಾದ ಬೊಗೊಸೊದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಫೋಟದ ತೀವ್ರತೆಗೆ ಪಟ್ಟಣದ ಬಹುಭಾಗವನ್ನು ನೆಲಸಮಗೊಳಿಸಿದೆ. ವಿದ್ಯುತ್ ಮಾರ್ಗಗಳು ಸೇರಿ ಮೂಲ ಸೌಕರ್ಯ ವ್ಯವಸ್ಥೆಗೆ ಹಾನಿಯಾಗಿದೆ.

ಟ್ರಕ್ ಮೋಟಾರ್‌ ಸೈಕಲ್‌ ಗೆ ಡಿಕ್ಕಿ ಹೊಡೆದು ಟ್ರಕ್‌ ಗೆ ಬೆಂಕಿ ಹೊತ್ತಿಕೊಂಡಿತು ಎಂದು ಅಪಿಯಾಟ್‌ನ ನಿವಾಸಿ ಆರೋನ್ ಆವುಸು ಹೇಳಿದ್ದಾರೆ. ಎರಡೂ ವಾಹನಗಳ ಚಾಲಕರು ಓಡಿಹೋದರು, ಬೇರೆಯವರಿಗೂ ಅಲ್ಲಿಂದ ಓಡಿ ಹೋಗುವಂತೆ ಎಚ್ಚರಿಕೆ ನೀಡಿದರು. ಆದರೆ ಕೆಲವರು ತಮ್ಮ ಫೋನ್‌ ಗಳಲ್ಲಿ ದೃಶ್ಯ ಚಿತ್ರೀಕರಿಸುತ್ತಿದ್ದರು. ಆಗ ಭೀಕರ ಸ್ಪೋಟ ಸಂಭವಿಸಿದೆ ಎನ್ನಲಾಗಿದೆ.

See also  ಆಸ್ಪತ್ರೆಗೆ ಬೆಂಕಿ: 11 ನವಜಾತ ಶಿಶುಗಳ ಸಾವು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

12795
NewsKannada

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು