News Kannada
Thursday, September 29 2022

ವಿದೇಶ

ಉಕ್ರೇನ್‌ ದಾಳಿ ತೀವ್ರಗೊಳಿಸಿದ ರಷ್ಯಾ :ಹಲವೆಡೆ ಸೈರನ್‌ ದಾಳಿ ಕೇಳಿರುವ ಬಗ್ಗೆ ವರದಿ - 1 min read

Photo Credit :

ಉಕ್ರೇನ್‌ ನನ್ನು ತನ್ನ ತೆಕ್ಕೆಗೆ ಪಡೆದುಕೊಳ್ಳಲು ರಷ್ಯಾ ಪಡೆಗಳು ದಾಳಿಯ ತೀವ್ರತೆಯನ್ನು ಹೆಚ್ಚಿಸುತ್ತಲಿದೆ. ಈ ನಡುವೆ ರಾಜಧಾನಿ ಕೀವ್‌ ನ ಮೇಲೆ ರಷ್ಯಾ ಆಕ್ರಮಣ ಶುರುವಾಗಿದ್ದು, ಹಲವೆಡೆ ದಾಳಿಯ ಸೈರನ್‌ ಕೇಳಿರುವ ಬಗ್ಗೆ ವರದಿಯಾಗಿದೆ.

ಉಕ್ರೇನ್‌ ರಾಜಧಾನಿ ಕೀವ್‌, ಒಡೆಸ್ಸಾದ ಲವಿವಿ ನಗರ, ಹಾರ್ಕೀವ್‌, ಸುಮಿ ಸೇರಿದಂತೆ ಹಲವೆಡೆ ವಾಯು ದಾಳಿಯ ಸೈರನ್‌ ಕೇಳಿಬರುತ್ತಿರುವುದನ್ನು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಈ ಬಗ್ಗೆ ಮಾಹಿತಿ ನೀಡಿದ ಉಕ್ರೇನ್‌ ರಕ್ಷಣಾ ಪಡೆ, ಕೀವ್‌ ಪ್ರದೇಶದಿಂದ ಕೇವಲ 25 ಕಿ.ಮೀ. ದೂರದಲ್ಲಿ ರಷ್ಯಾ ಸೇನೆ ನೆಲೆಯೂರಿದೆ ಎಂದು ತಿಳಿಸಿದೆ. ಕಳೆದ 12 ದಿನಗಳ ದಾಳಿಯಲ್ಲಿ ಮುರಿಪೊಲ್‌ ನಗರ ಒಂದರಲ್ಲೇ ಸುಮಾರು 1500 ಜನರಯ ಬಲಿಯಾಗಿದ್ದಾರೆ ಎಂದು ವರದಿ ತಿಳಿಸಿದೆ.

ಉಕ್ರೇನ್‌ ಅಧ್ಯಕ್ಷ ವ್ಲೋಡಮೀರ್‌ ಝೆಲೆನ್ಸ್ಕಿ ನಗರದಲ್ಲಿ ಆಹಾರ, ನೀರು ಇಲ್ಲದೆ ಸಿಲುಕಿರುವವರನ್ನು ಬೇರೆಡೆ ಸ್ಥಳಾಂತರಿಸುವ ಜವಾಬ್ದಾರಿ ಹೊತ್ತಿದ್ದಾರೆ. ಕಳೆದ ಅನೇಕ ದಿನಗಳಿಂದ ರಷ್ಯಾದ ಆಕ್ರಮಣ ಹೆಚ್ಚಾಗುತ್ತಿದ್ದು, ಗರ್ಭಿಣಿಯರ ಆಸ್ಪತ್ರೆಗಳನ್ನು ಗುರಿಯಾಗಿಸಿ ದಾಳಿ ನಡೆಸಿವೆ.

See also  ರಷ್ಯಾ ದಾಳಿಗೆ ಉಕ್ರೇನ್‌ ನಲ್ಲಿ ಈವರೆಗೆ 7 ಮಂದಿ ಸಾವು, 9 ಜನರಿಗೆ ಗಾಯ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

12792
NewsKannada

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು